ಸಿಎಂ ಪಟ್ಟಕ್ಕಾಗಿ ಸದ್ದಿಲ್ಲದೆ ಶುರುವಾಗಿದ್ಯಾ ಶಕ್ತಿ ಪ್ರದರ್ಶನ..? ಕೆಪಿಸಿಸಿ ಅಧ್ಯಕ್ಷರು ನೋಟಿಸ್ ಕೊಡ್ತೇನೆ ಎಂದದ್ದು ಯಾರಿಗೆ..?

Jul 3, 2024, 4:18 PM IST

ಠಕ್ಕರ್ ಗೇಮ್ ಪಾಲಿಟಿಕ್ಸ್. ಇದು ಬರೀ ಪಾಲಿಟಿಕ್ಸ್ ಅಲ್ಲ. ಕೈ ಸಾಮ್ರಾಜ್ಯದ ಅಂತರ್ಯುದ್ಧದ ಅಸಲಿ ಕಥೆ.  ಸಿದ್ದರಾಮಯ್ಯ(Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಬಣಗಳ ನಡುವಿನ ಘರ್ಷಣೆಯ ಕುಲುಮೆಯಲ್ಲಿ ಹೊತ್ತಿಕೊಂಡಿರೋ ಕಿಡಿ ಕಿಚ್ಚಿನ ಕಥೆ. ಕಾಂಗ್ರೆಸ್ (COngress)ಪಾಳೆಯದೊಳಗೆ ಭುಗಿಲೆದ್ದಿರೋ ಕುರ್ಚಿ ಕಾಳಗದ ಕಿಚ್ಚು ತಣ್ಣಗಾಗುವ ಲಕ್ಷಣಗಳೇ ಕಾಣ್ತಿಲ್ಲ. ಒಬ್ಬರಾದರ ಮೇಲೊಬ್ಬರಂತೆ ಪೈಪೋಟಿಗೆ ಬಿದ್ದವರಂತೆ, ಎಲ್ಲರೂ ನಾ ಮುಂದು ತಾ ಮುಂದು ಎಂಬಂತೆ ಆ ಕಿಚ್ಚಿಗೆ ತುಪ್ಪ ಸುರಿಯುತ್ತಿದ್ದಾರೆ. ಪರಿಣಾಮ ಅಗ್ನಿ ಪರ್ವತದಂತೆ ಧಗಧಗಿಸ್ತಾ ಕಾಂಗ್ರೆಸ್ ಕೋಟೆ. ಇದು ಸಿಎಂ ಕುರ್ಚಿಯಾಗಿ, ಡಿಎಂ ಪಟ್ಟಕ್ಕಾಗಿ, ಕೆಪಿಸಿಸಿ ಚುಕ್ಕಾಣಿಗಾಗಿ ಶುರುವಾಗಿರೋ ಘರ್ಷಣೆ. ಈ ಘರ್ಷಣೆಗೆ ಮೊದಲ ಶಂಖನಾದ ಮೊಳಗಿಸಿದವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಸಚಿವ ಕೆ.ಎನ್ ರಾಜಣ್ಣ. ಎಲ್ಲಾ ಆಂತರಿಕ ಸಂಘರ್ಷದ ಮೂಲ ಸಚಿವ ಕೆ.ಎನ್. ರಾಜಣ್ಣ(KN Rajanna) ಶುರು ಮಾಡಿದ್ದ ಕುರ್ಚಿ ಕಾಳಗ. ಡಿಸಿಎಂ ಪಟ್ಟದ ಮೇಲೆ ಸಿದ್ದರಾಮಯ್ಯ ಆಪ್ತರ ಕಣ್ಣು ಬೀಳ್ತಾ ಇದ್ದಂತೆ ಕಾಂಗ್ರೆಸ್ ಪಾಳೆಯ ಕಾದ ಕುಲುಮೆಯಂತಾಗಿ ಬಿಟ್ಟಿದೆ. ಆ ಕುಲೆಮೆಯೊಳಗಿಂದ ನುಗ್ಗಿ ಬಂದ ಸಿಎಂ ಕುರ್ಚಿಯ ಕಿಚ್ಚು, ಈಗ ಜ್ವಾಲಾಮುಖಿಯಾಗಿ ಬಿಟ್ಟಿದೆ. ಡಿಕೆ ಶಿವಕುಮಾರ್ ಆಪ್ತರು, ಒಕ್ಕಲಿಗ ಸಮುದಾಯದ ಸ್ವಾಮೀಜಿಯೊಬ್ಬರು ಮುಖ್ಯಮಂತ್ರಿ ಪಟ್ಟದ ಬಗ್ಗೆ ಆಡಿರೋ ಮಾತುಗಳು ಅಂತರ್ಯುದ್ಧದ ಅಖಾಡದಲ್ಲಿ ಭಾರೀ ಸಂಘರ್ಷಕ್ಕೆ ಕಾರಣವಾಗಿ ಬಿಟ್ಟಿದೆ. ಸಿಎಂ ಪಟ್ಟದ ಮೇಲೆ ಡಿಕೆಶಿ ಆಪ್ತರ ಕಣ್ಣು ಬೀಳ್ತಾ ಇದ್ದಂತೆ, ಇತ್ತ ಸಿದ್ದರಾಮಯ್ಯ ಸೇನೆಯ ಸಿಪಾಯಿಗಳು ದಂಗೆ ಎದ್ದಿದ್ದಾರೆ. ದಲಿತ ಸಿಎಂ ಅಸ್ತ್ರ ಪ್ರಯೋಗಿಸಿದ್ದಾರೆ, ನಂಬರ್ ಗೇಮ್ ರಹಸ್ಯದ ಬಗ್ಗೆ ಮಾತಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಸಿಎಂ ಗಮನಕ್ಕೆ ಬಾರದೆ ಮುಡಾ ಹಗರಣ ನಡೆದಿರುವುದಿಲ್ಲ, ಸೂಕ್ತ ತನಿಖೆಯಾಗಲಿ: ವಿಜಯೇಂದ್ರ