ಕಾಂಗ್ರೆಸ್  ಪಾಲಿಗೆ ತಲೆನೋವಾಯ್ತಾ ಕಮಿಷನ್ ಕಂಟಕ..?  ಶುರುವಾಯ್ತು ರಣ ರಾಜಕಾರಣ !

ಕಾಂಗ್ರೆಸ್ ಪಾಲಿಗೆ ತಲೆನೋವಾಯ್ತಾ ಕಮಿಷನ್ ಕಂಟಕ..? ಶುರುವಾಯ್ತು ರಣ ರಾಜಕಾರಣ !

Published : Aug 12, 2023, 02:22 PM IST

ಸಿದ್ದರಾಮಯ್ಯ ಸರ್ಕಾರದ ಮುಂದೆ ಗುತ್ತಿಗೆದಾರರ ಭಾಗ್ಯದ ಬೇಡಿಕೆ!
ಕಮಿಷನ್ ವಿಚಾರದಲ್ಲಿ ಶುರುವಾಗಿದೆ ರಣರಣ ರಾಜಕಾರಣ..!
ಮಾತಲ್ಲೇ ಹೊಸ ಸರ್ಕಾರಕ್ಕೆ ಕ್ಲೀನ್ ಚಿಟ್ ಕೊಟ್ಟರಾ ಕೆಂಪಣ್ಣ..?

ಈ ಹಿಂದೆ ಬಿಜೆಪಿ(BJP) ಸರ್ಕಾರ ಇದ್ದಾಗ, 40 ಪರ್ಸಂಟ್ ಕಮಿಷನ್(Commission) ಅನ್ನೋ ಬಿರುಗಾಳಿ ಬೀಸಿತ್ತು. ಅದರ ಅಬ್ಬರಕ್ಕೆ ಸರ್ಕಾರ ಅಲುಗಾಡಿದ್ದಂತೂ ನಿಜ. ಅಂದು ಬಿಜೆಪಿ ಸರ್ಕಾರದ ವಿರುದ್ಧ, ಇಂದು ಆಡಳಿತ ನಡೆಸ್ತಾ ಇರೋ ಕಾಂಗ್ರೆಸ್ ಹೋರಾಟ ಮಾಡಿತ್ತು. ಆದ್ರೆ ಈಗ ನೋಡಿದ್ರೆ, ಆ ಕಮಿಷನ್ ಕಂಟಕ ಕಾಂಗ್ರೆಸ್ (Congress) ಕೊರಳಿಗೂ ಸುತ್ತಿಕೊಳ್ತಿದೆ ಅನ್ನೋ ಮಾತು ಕೇಳಿಬರ್ತಾ ಇದೆ. ಹೊಸದೊಂದು ಕೋಲಾಹಲ ಶುರುವಾಗಿದೆ. ಗುತ್ತಿಗೆದಾರರು ಆಡೋ ಒಂದೊಂದು ಮಾತೂ ಕೂಡ ರಾಜಕೀಯ ಚದುರಂಗದ ದಿಕ್ಕು ದೆಸೆ ಬದಲಾಯಿಸ್ತಾ ಇದೆ. ಅದರಲ್ಲೂ ಕಮಿಷನ್ ಆರೋಪದ ಕಹಾನಿಯಲ್ಲಿ, ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗ್ತಾ ಇದೆ. ಕಮಿಷನ್ ಆರೋಪ ಅನ್ನೋ ತೂಫಾನ್  ಕಳೆದ ಸಲ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಬುಡವನ್ನೇ ಅಲುಗಾಡಿಸಿತ್ತು. ಅದು ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಮುನ್ನುಡಿ ಬರೆದಿದ್ದ ಸುನಾಮಿ ಅಂದ್ರೂ ತಪ್ಪಾಗಲಿಕ್ಕಿಲ್ಲ. ಅದೇ ತೂಫಾನ್, ಅದೇ ಸುನಾಮಿ ಈಗ ಕಾಂಗ್ರೆಸ್ ಸರ್ಕಾರದ ಮೇಲೆ ಅಪ್ಪಳಿಸ್ತಿರೊ ಹಾಗೆ ಕಾಣ್ತಾ ಇದೆ.. ಸಿದ್ದರಾಮಯ್ಯನೋರ(Siddaramaiah) ಸರ್ಕಾರಕ್ಕೆ ಕಮಿಷನ್ ಕಂಟಕ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  ರೀಲ್ಸ್‌ನಿಂದ ಸಂಸಾರದಲ್ಲಿ ಬಿರುಕು: ಕೊಲೆಗಾರನ ಮನಸ್ಸು ಬದಲಿಸಿದ್ಲು ನಿಮಿಷಾಂಬ ತಾಯಿ !

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
Read more