vuukle one pixel image

ಮೋದಿಯನ್ನು ನೋಡುವುದಕ್ಕಾಗಿಯೇ ಜನ ಬರುತ್ತಿದ್ದಾರೆ: ಚಕ್ರವರ್ತಿ ಸೂಲಿಬೆಲೆ

Bindushree N  | Published: May 7, 2023, 1:07 PM IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಸಿಲಿಕಾನ್‌ ಸಿಟಿಯಲ್ಲಿ ಎರಡನೇ ದಿನದ ರೋಡ್‌ ಶೋ ನಡೆಸಿದರು. ಎಲ್ಲೆಲ್ಲಿ ಮೋದಿ ರೋಡ್‌ ಶೋ ನಡೆಯುತ್ತಿದೆಯೋ, ಅಲ್ಲಲ್ಲಿ ಜನ ಭರದ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲದೇ  ಮೋದಿ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಮೋದಿ ರೋಡ್‌ ಶೋ ಬಗ್ಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಭಾರತದ ರಾಜಕಾರಣದ ಸೂಪರ್‌ ಸ್ಟಾರ್‌. ಅವರು ಬಾಲಿವುಡ್‌, ಹಾಲಿವುಡ್‌ ನಟರನ್ನೂ ಸಹ ಮೀರಿಸುತ್ತಾರೆ. ಮೋದಿಯವರನ್ನು ನೋಡಲೆಂದೇ ಜನ ಬರುತ್ತಿದ್ದಾರೆ.  ಸುಮಾರು ಮೂರು ಗಂಟೆಯಿಂದ ಜನ ಮೋದಿ ನೋಡಲು ಕಾಯುತ್ತಿದ್ದರು. ದೊಡ್ಡವರಿಂದ ಹಿಡಿದು ಚಿಕ್ಕವರವರೆಗೆ ಎಲ್ಲಾರೂ ಮೋದಿ ನೋಡಲು ಕಾತುರದಿಂದ ಕಾಯುತ್ತಿರುವುದು ನೋಡಿದ್ರೆ, ಹೃದಯ ತುಂಬಿ ಬರುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: 14 ವರ್ಷದೊಳಗಿನ ಮಕ್ಕಳಿಗಾಗಿ ಹನುಮನ ವೇಷಧಾರಣೆ ಸ್ಪರ್ಧೆ: ಚಕ್ರವರ್ತಿ ಸೂಲಿಬೆಲೆ