May 23, 2023, 12:29 PM IST
ಪ್ರಧಾನಿ ಮೋದಿಯವರ ಕನಸಿನ ಕೂಸು ಸೆಂಟ್ರಲ್ ವಿಸ್ಟಾ ಲೋಕಾರ್ಪಾಣೆಗೆ ಸಿದ್ಧವಾಗಿ ನಿಂತಿದೆ. ಆದ್ರೆ ಯಾವಾಗ ಸೆಂಟ್ರಲ್ ವಿಸ್ಟಾ ಯೋಜನೆಗೆ ಮೋದಿ ಕೈ ಹಾಕಿದ್ರೋ, ಆಗಿಂದಲೇ ಅದಕ್ಕೆ ವಿರೋಧವೂ ವ್ಯಕ್ತವಾಯ್ತು. ಮೊದಲೇ ದೇಶ ಕೊರೊನಾ ಶಾಪಗ್ರಸ್ತವಾಗಿದೆ. ಜನರ ಕೈಲಿ ನಯಾಪೈಸೆನೂ ಇಲ್ಲ. ಆದ್ರೆ ಸರ್ಕಾರ ಮಾತ್ರ, ವಿನಾಕಾರಣ ದುಂದು ಮಾಡ್ತಿದೆ ಅಂತ ರಾಹುಲ್ ಗಾಂಧಿಯೂ ಸೇರಿದಂತೆ, ಅನೇಕ ಮಂದಿ ವಿರೋಧಿಗಳು ಆಕ್ರೋಶ ವ್ಯಕ್ತಪಡಿಸಿದ್ರು. ಆದ್ರೆ ಮೋದಿ ಇವರ ವಿರೋಧಗಳನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡಿಲ್ಲ. ತಮ್ಮ ಕೆಲಸದ ಮೇಲೆ ಭರವಸೆ ಇಟ್ಟು, ತಾವು ಮಾಡ್ತಿರೋ ಕೆಲಸದ ಅವಶ್ಯಕತೆ ಏನು ಅಂತ ಅರಿತುಕೊಂಡ್ರು.
ಇದನ್ನೂ ವೀಕ್ಷಿಸಿ: ಪಪುವಾ ನ್ಯೂಗಿನಿಯಾ ಪ್ರಧಾನಿ, ಮೋದಿ ಕಾಲಿಗೆ ಬಿದ್ದಿದ್ದೇಕೆ !?: ಮೋದಿ ಆಟೋಗ್ರಾಫ್ ಕೇಳಿದ ಅಮೆರಿಕಾ, ಆಸ್ಟ್ರೇಲಿಯಾ ಪ್ರಧಾನಿಗಳು !