ದೇಶಾದ್ಯಂತ ಜಾತಿ ಗಣತಿಗೆ ಮತ್ತಷ್ಟು ಕೂಗು ಏಳುತ್ತಾ? ನಿತೀಶ್‌ ಹಾದಿಯಲ್ಲೇ ಸಾಗ್ತಾರಾ ಸಿದ್ದರಾಮಯ್ಯ?

Oct 4, 2023, 12:16 PM IST

ಬಿಹಾರದಲ್ಲಿ ದೇಶದ ಮೊದಲ ಜಾತಿ ಗಣತಿ ವರದಿ ಬಿಡುಗಡೆ ಆಗಿದೆ. ಲೋಕಸಭೆ(Loksabha) ಚುನಾವಣೆಗೂ ಮುನ್ನ ಜಾತಿ ಗಣತಿ ಬಹಿರಂಗವಾಗಿದೆ. ಬಿಹಾರ(Bihar) ಜಾತಿ ಗಣತಿ ವರದಿ ದೇಶಾದ್ಯಂತ ಸಂಚಲನವನ್ನು ಸೃಷ್ಟಿಸಿದೆ. ಈ ಮೂಲಕ ದೇಶಾದ್ಯಂತ ಜಾತಿ ಗಣತಿಗೆ ಮತ್ತಷ್ಟು ಕೂಗು ಏಳುತ್ತಾ ಎಂಬ ಪ್ರಶ್ನೆ ಈಗ ಮೂಡಿದೆ. ಕರ್ನಾಟಕದಲ್ಲಿ ಗಣತಿ ನಡೆದ್ರೂ ವರದಿ ಇನ್ನೂ ಸಲ್ಲಿಸಿಲ್ಲ. 2015ರಲ್ಲಿ ಕರ್ನಾಟಕ ಸರ್ಕಾರದಿಂದ ಜಾತಿ ಗಣತಿಗೆ(Caste census) ಅಧಿಸೂಚನೆ ಹೊರಡಿಸಲಾಗಿತ್ತು. ಹಿಂದುಳಿದ ವರ್ಗಗಳ ಆಯೋಗದಿಂದ(Backward Classes Commission) ಜಾತಿ ಗಣತಿ ಆಗಿದೆ. ಆದ್ರೆ, ರಾಜ್ಯದಲ್ಲಿ ಜಾತಿ ಗಣತಿ ವರದಿ ಸರ್ಕಾರಕ್ಕೆ ಇನ್ನೂ ಸಲ್ಲಿಸಿಲ್ಲ. ನಿತೀಶ್‌ ಹಾದಿಯಲ್ಲೇ ಸಿಎಂ ಸಿದ್ದರಾಮಯ್ಯ ಸಾಗ್ತಾರಾ ಎಂದು ಕಾದು ನೋಡಬೇಕಿದೆ. ಸಚಿವರು, ಶಾಸಕರಿಂದ ಜಾತಿಗಣತಿ ಬಿಡುಗಡೆಗೆ ಒತ್ತಾಯ ಕೇಳಿಬರುತ್ತಿದೆ. ನವೆಂಬರ್‌ನಲ್ಲಿ ವರದಿ ಸಲ್ಲಿಸಲು ಆಯೋಗ ಸಿದ್ಧತೆ ಮಾಡಿಕೊಂಡಿದೆ. ಜಾತಿಗಣತಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ ಎಂದಿರುವ ಆಯೋಗ. ಆಯೋಗದ ವರದಿಯನ್ನು ಸರ್ಕಾರ ಬಹಿರಂಗಪಡಿಸಬೇಕಿದೆ. 

ಇದನ್ನೂ ವೀಕ್ಷಿಸಿ:  ಶಿವಮೊಗ್ಗದಲ್ಲಿ ಹೈ ಅಲರ್ಟ್‌: ರಾಗಿಗುಡ್ಡ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರ ಸರ್ಪಗಾವಲು