'ಹೈ' ಲೆವೆಲ್ ಮೀಟಿಂಗ್‌ಗೆ ಬಿಜೆಪಿ ರೆಬೆಲ್ಸ್ ಚಕ್ಕರ್ ಹಾಕಿದ್ದೇಕೆ..? ನಾಲ್ಕು ಗೋಡೆಗಳ ಮಧ್ಯೆ ಅಸಲಿಗೆ ನಡೆದದ್ದೇನು..?

'ಹೈ' ಲೆವೆಲ್ ಮೀಟಿಂಗ್‌ಗೆ ಬಿಜೆಪಿ ರೆಬೆಲ್ಸ್ ಚಕ್ಕರ್ ಹಾಕಿದ್ದೇಕೆ..? ನಾಲ್ಕು ಗೋಡೆಗಳ ಮಧ್ಯೆ ಅಸಲಿಗೆ ನಡೆದದ್ದೇನು..?

Published : Sep 01, 2023, 02:51 PM IST

ಒಡಕಿನ ಮನೆಯಲ್ಲಿ ಕೇಸರಿ ಕಿಚ್ಚು..ಒಗ್ಗಟ್ಟಿನ ಮಂತ್ರ..!
“ಹೈ” ಲೆವೆಲ್ ಮೀಟಿಂಗ್’ಗೆ ರೆಬೆಲ್ಸ್ ಚಕ್ಕರ್ ಹಾಕಿದ್ದೇಕೆ..?
ನಾಲ್ಕು ಗೋಡೆಗಳ ಮಧ್ಯೆ ಅಸಲಿಗೆ ನಡೆದದ್ದೇನು..?

ಕಾಂಗ್ರೆಸ್‌ 100 ದಿನಗಳಲ್ಲಿ 4 ಗ್ಯಾರಂಟಿಗಳನ್ನು ಈಡೇರಿಸಿ ಮುನ್ನುಗ್ತಾ ಇದೆ. ಆದ್ರೆ ಪ್ರಮುಖ ಪ್ರತಿಪಕ್ಷ ಬಿಜೆಪಿಯ (BJP) ಕಥೆಯೇ ಬೇರೆ. ಒಗ್ಗಟ್ಟಿಗೆ ಮತ್ತೊಂದು ಹೆಸರು ಎಂಬಂತಿದ್ದ ಪಕ್ಷದಲ್ಲಿ ಒಡಕು ಮೂಡಿದೆ. ಶಿಸ್ತಿಗೆ ಇನ್ನೊಂದು ಹೆಸರು ಅಂತಿದ್ದ ಪಾರ್ಟಿಯಲ್ಲಿ ಅಶಿಸ್ತು. ಹೊಸ ಸರ್ಕಾರ ಬಂದು 100 ದಿನ ಕಳೆದ್ರೂ ಬಿಜೆಪಿಯಲ್ಲಿ ಇನ್ನೂ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸೋ ಸೇನಾನಿ ಯಾರು ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಬಿಜೆಪಿಯ ಈ ವೈಫಲ್ಯವೇ ಆಡಳಿತಾರೂಢ ಕಾಂಗ್ರೆಸ್‌ಗೆ(Congress) ಅಸ್ತ್ರವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡದ್ದೇ ತಡ, ರೇಣುಕಾಚಾರ್ಯ ರೆಬೆಲ್ ಆಗಿದ್ದಾರೆ. ಒಂದ್ಕಡೆ ಎಲೆಕ್ಷನ್‌ನಲ್ಲಿ ಸೋತ ಸಿಟ್ಟು, ಮತ್ತೊಂದೆಡೆ ಪಕ್ಷದ ಕೆಲ ನಿರ್ಧಾರಗಳ ಬಗ್ಗೆ ಕೋಪ. ಸ್ವಪಕ್ಷೀಯರ ವಿರುದ್ಧವೇ ರೆಬೆಲ್ ರೇಣುಕಾಚಾರ್ಯ(Renukacharya) ತಿರುಗಿ ಬಿದ್ದಿದ್ದಾರೆ. ಬಾಂಬೆ ಬಾಯ್ಸ್(Bombay Boys) ಖ್ಯಾತಿಯ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಕೂಡ ಬಂಡಾಯದ ಬಾವುಟ ಹಾರಿಸಿದ್ದಾರೆ. ಮತ್ತೊಂದೆಡೆ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಕೂಡ ಅಸಮಾಧಾನ ಹೊರ ಹಾಕಿದ್ದಾರೆ. ಹೀಗೆ ಕರ್ನಾಟಕದ ಕೇಸರಿ ಪಡೆ ಮನೆಯೊಂದು ಮೂರು ಬಾಗಿಲಾಗಿರೋ ಹೊತ್ತಲ್ಲೇ ಕೇಸರಿ ಪಾಳೆಯದಲ್ಲಿ ಮಹತ್ವದ ಸಭೆಯೊಂದು ನಡೆದಿದೆ. ಸಭೆ ನಡೆದಿರೋದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಹೆಡ್ ಆಫೀಸ್‌ನಲ್ಲಿ. ಸಭೆಯ ನೇತೃತ್ವ ವಹಿಸಿದವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್.

ಇದನ್ನೂ ವೀಕ್ಷಿಸಿ:  10ರಲ್ಲಿ 8 ಮಂದಿಗೆ ಮತ್ತೆ ಮೋದಿಯೇ ಪ್ರಧಾನಿಯಾಗ್ಬೇಕಂತೆ..! ಮೋದಿ ಆಡಳಿತದ ಬಗ್ಗೆ ಹೇಳೋದೇನು ವಿದೇಶಿಗರು?

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
Read more