ವಿಪಕ್ಷಗಳ ಒಗ್ಗಟ್ಟು ನೋಡಿ ಬೆಚ್ಚಿಬಿತ್ತಾ ಬಿಜೆಪಿ ?: ಕೇಂದ್ರದ ಬಗ್ಗೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅಪಹಾಸ್ಯ

Jun 19, 2023, 11:39 AM IST

ವಿಪಕ್ಷಗಳ ಒಗ್ಗಟ್ಟು ನೋಡಿ ಬಿಜೆಪಿ ಬೆಚ್ಚಿ ಬಿದ್ದಿದೆಯಂತೆ. ಹಾಗಾಗಿ ಅವಧಿಗೂ ಮುನ್ನವೇ ಲೋಕಸಭೆ ಚುನಾವಣೆ ನಡೆಸಲು ಬಿಜೆಪಿ ಮುಂದಾಗಿದೆ ಎಂದು ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹೇಳಿದ್ದಾರೆ. ವಿರೋಧ ಪಕ್ಷಗಳ ಮಹಾಘಟ್ಭಂಧನ್ ಪವಾಡ ಮಾಡುತ್ತಾ? ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ನಮ್ಮ ವಿರೋಧ ಪಕ್ಷಗಳ ಒಗ್ಗಟ್ಟಿನ ಪ್ರಯತ್ನದಲ್ಲಿನ ವೇಗವನ್ನು ಹೆಚ್ಚಿಸಬೇಕಾಗಿದೆ. ಅದು ಬಿಜೆಪಿಗೆ ದೊಡ್ಡ ನಷ್ಟವನ್ನು ಉಂಟುಮಾಡುತ್ತದೆ. ಆದ್ದರಿಂದ ಅವರು ಬೇಗ ಚುನಾವಣೆ ನಡೆಸಲು ಮುಂದಾಗಬಹುದು ಎಂದು ಬಿಹಾರ ಮುಖ್ಯಮಂತ್ರಿ ಪಾಟ್ನಾದಲ್ಲಿ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ಮಣಿಪುರದಲ್ಲಿ ನಿಲ್ಲದ ಮೀಸಲಾತಿ ದಂಗೆ: ರಕ್ತ ಚರಿತ್ರೆಯ ಸ್ಫೋಟಕ ಸತ್ಯ ಬಿಚ್ಚಿಟ್ಟ ಸೇನಾಧಿಕಾರಿ..!