ಎಲ್ಲೆಲ್ಲೂ ಸದ್ದು ಮಾಡುತ್ತಿದೆ ಉಚಿತಾಯುಧ: ಆ ಅಸ್ತ್ರ ಕೈಗೆತ್ತಿಕೊಳ್ಳುತ್ತಾ ಕೇಸರಿ ಪಾಳಯ..?

ಎಲ್ಲೆಲ್ಲೂ ಸದ್ದು ಮಾಡುತ್ತಿದೆ ಉಚಿತಾಯುಧ: ಆ ಅಸ್ತ್ರ ಕೈಗೆತ್ತಿಕೊಳ್ಳುತ್ತಾ ಕೇಸರಿ ಪಾಳಯ..?

Published : Aug 28, 2023, 03:05 PM IST

ಮೋದಿ ವಿರುದ್ಧ ಗುಡುಗಲು I.N.D.I.A ಸಿದ್ಧ!
ಎಲ್ಲೆಲ್ಲೂ ಸದ್ದು ಮಾಡುತ್ತಿದೆ ಉಚಿತಾಯುಧ!
ಆ ಅಸ್ತ್ರ ಕೈಗೆತ್ತಿಕೊಳ್ಳುತ್ತಾ ಕೇಸರಿ ಪಾಳಯ..?

ಕರ್ನಾಟಕದಲ್ಲಿ ಹುಟ್ಟಿಕೊಂಡ ರಾಜಕೀಯ ಅಲೆಯೊಂದು, ಈಗ ಸುನಾಮಿಯಂತೆ ಇಡೀ ದೇಶವನ್ನೇ ಆವರಿಸಿಕೊಳ್ಳೋ ಲಕ್ಷಣಗಳು ಕಾಣಿಸ್ತಿದ್ದಾವೆ. ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರೋ ಲೋಕಸಂಗ್ರಾಮದಲ್ಲಿ, ಮಹಾವಿಜಯ ಸಾಧಿಸೋಕೆ, ಕರ್ನಾಟಕದಲ್ಲಿ ಬಳಸಿದ ಅಸ್ತ್ರವನ್ನೇ ಪ್ರಯೋಗಿಸೋ ಸಾಧ್ಯತೆ ಎದ್ದು ಕಾಣ್ತಾ ಇದೆ. ಕರ್ನಾಟಕದಲ್ಲಿ ನಡೆದ ವಿಧನಸಭಾ ಚುನಾವಣೆ ವೇಳೆ, ಕಾಂಗ್ರೆಸ್(Congress) ಪಕ್ಷ 5 ಉಚಿತ ಗ್ಯಾರಂಟಿಗಳನ್ನ(guarantees) ನಾವು ರಾಜ್ಯದ ಜನರಿಗೆ ಕೊಡ್ತೀವಿ ಅನ್ನೋ ಘೋಷಣೆಯನ್ನ ಮಾಡಿತ್ತು. ಚುನಾವಣೆಯಲ್ಲಿ(Election) ಭರ್ಜರಿಯಾಗಿ ಗೆದ್ದು ಬೀಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ಕಾರಣಗಳಲ್ಲಿ ಪ್ರಮುಖವಾಗಿ ಇದ್ದಿದ್ದೇ ಉಚಿತ ಯೋಜನೆಗಳು.ಇವುಗಳಿಂದಲೇ ಭರ್ಜರಿಯಾಗಿ ಗೆಲುವನ್ನೂ ಕಂಡಿತ್ತು.  ಈಗ ಹಂತಹಂತವಾಗಿ ಆ ಯೋಜನೆಗಳನ್ನೆಲ್ಲಾ ಪೂರೈಸ್ತಾ, ಜನರ ಮನಸ್ಸಲ್ಲಿ ದೊಡ್ಡದೊಂದು ಪರಿಣಾಮ ಉಂಟುಮಾಡೋ ಸಾಧ್ಯತೆ ಎದ್ದು ಕಾಣ್ತಾ ಇದೆ. ಸಧ್ಯಕ್ಕೆ ಯುವನಿಧಿ ಮತ್ತು ಗೃಹಲಕ್ಷ್ಮಿ ಬಿಟ್ಟು ಮಿಕ್ಕೆಲ್ಲಾ ಯೋಜನೆಗಳ ಫಲಾನುಭವಿಗಳು ರಾಜ್ಯದಲ್ಲಿದ್ದಾರೆ. ಇನ್ನೇನು ಕೆಲವು ದಿನಗಳಲ್ಲಿ ಅವೂ ಕೂಡ ಜಾರಿಯಾಗೋ ಸಾಧ್ಯತೆಯಂತೂ ಖಂಡಿತಾ ಇದೆ. ಈ ಯೋಜನೆಗಳನ್ನ ಘೋಷಣೆ ಮಾಡಿದ್ದರಿಂದಲೇ ಕಾಂಗ್ರೆಸ್‌ಗೆ ಗೆಲುವು ದಕ್ಕಿದಂತಾಗಿದೆ. ಇನ್ನು, ಈ ಯೋಜನೆಗಳು ಜಾರಿಯಾದ್ರೆ, ಅದು ಕಾಂಗ್ರೆಸ್ ಪಾಲಿಗೆ ವರವಾಗೋದ್ರಲ್ಲಿ ಅನುಮಾನವಂತೂ ಇಲ್ಲ.. ಅಷ್ಟೆ ಅಲ್ಲ, ಇದರ ಇಂಪ್ಯಾಕ್ಟ್ ಏನು ಅನ್ನೋದು, ಮುಂದಿನ ಲೋಕಸಭಾ ಚುನಾವಣೆಯಲ್ಲೇ ಗೊತ್ತಾಗಿಬಿಡುತ್ತೆ.

ಇದನ್ನೂ ವೀಕ್ಷಿಸಿ:  ಮಾನವ ಸಹಿತ ರಾಕೆಟ್ ಉಡಾವಣೆಗೆ ಇಸ್ರೋ ಪ್ಲ್ಯಾನ್: ಪ್ರಯೋಗಿಕ ‘ವ್ಯೂಮಮಿತ್ರ’ ಆಕ್ಟೋಬರ್‌ಗೆ ಆಗಸಕ್ಕೆ..!

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
Read more