
ಮಾಜಿ ಸಚಿವ ಗೋವಿಂದ್ ಕಾರಜೋಳಗೆ ಚಿತ್ರದುರ್ಗ ಟಿಕೆಟ್
ಭಾರಿ ವಿರೋಧದ ಮಧ್ಯೆಯೂ ಬಿಜೆಪಿ ಹೈಕಮಾಂಡ್ ಮಣೆ..!
ಬಾಗಲಕೋಟೆ ಜಿಲ್ಲೆಯಿಂದ ಚಿತ್ರದುರ್ಗಕ್ಕೆ ರಾಜಕಾರಣ ಶಿಫ್ಟ್
ರಾಜ್ಯದ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯರಾದ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ(Govind Karjol) ಅವರಿಗೆ ಚಿತ್ರದುರ್ಗ(Chitradurga) ಲೋಕಸಭಾ(Lok Sabha) ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ(BJP) ಟಿಕೆಟ್ ನೀಡಲಾಗಿದೆ. ಇನ್ನು ಬಿಜೆಪಿಯಿಂದ ನಾಲ್ಕನೇ ಅಭ್ಯರ್ಥಿಗೆ ಸ್ಥಾನ ಪಲ್ಲಟ ಮಾಡಿಸಿ ಟಿಕೆಟ್ ನೀಡಲಾಗಿದೆ. ಕೇಂದ್ರ ಸಚಿವ ನಾರಾಯಣಸ್ವಾಮಿ ಚಿತ್ರದುರ್ಗ ಟಿಕೆಟ್ ಮಿಸ್ ಆಗಿದ್ದು, ಹೊಳಲ್ಕೆರೆ ಶಾಸಕ ಚಂದ್ರಪ್ಪ ಪುತ್ರನಿಗೂ BJP ಟಿಕೆಟ್ ತಪ್ಪಿದೆ. ಕೊನೆಗೂ ಹಿರಿಯ ನಾಯಕನಿಗೆ ಹೈಕಮಾಂಡ್ ಮಣೆ ಹಾಕಿದೆ. ವಿಧಾನಸಭೆಯಲ್ಲಿ ಸೋತ 6ನೇ ನಾಯಕನಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಕೋಟೆನಾಡಲ್ಲಿ ಕಾರಜೋಳ ವರ್ಸಸ್ ಬಿ ಎನ್ ಚಂದ್ರಪ್ಪ ನಡುವೆ ಸ್ಫರ್ಧೆ ನಡೆಯಲಿದೆ.
ಇದನ್ನೂ ವೀಕ್ಷಿಸಿ: ಚೊಚ್ಚಲ ಸಿನಿಮಾ ಬಗ್ಗೆ ದೊಡ್ಮನೆ ಕುಡಿ ಹೇಳಿದ್ದೇನು? ಯುವ ಚಿತ್ರ ಶುರುವಾಗಿದ್ದು ಹೇಗೆ? ಇದಕ್ಕೆ ಕಾರಣ ಯಾರು?