ಬಿಜೆಪಿ ಈಗ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಈ ಹಿನ್ನೆಲೆ ಕೇಂದ್ರ ಸಚಿವರು ರಾಜ್ಯಕ್ಕೆ ಬಂದು ಮಾಹಿತಿ ಕಲೆ ಹಾಕಲಿದ್ದಾರೆ.
ವಿಧಾನಸಭೆಯಲ್ಲಿ ಸೋತ ಬಿಜೆಪಿಗೆ ಈಗ ಲೋಕಸಭಾ ಚುನಾವಣಾ(Loksabha Election) ಗೆಲ್ಲುವ ಟಾರ್ಗೆಟ್ ಆಗಿದೆ. ಹಾಗಾಗಿ ಅಖಾಡಕ್ಕೆ ಇಳಿಯಲು ಈಗ ಬಿಜೆಪಿ (BJP) ಸಜ್ಜಾಗುತ್ತಿದೆ. ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಈಗ ಬಿಜೆಪಿ ಟಾರ್ಗೆಟ್ ಆಗಿದ್ದು, ತಾಲೀಮು ನಡೆಸುತ್ತಿದೆ. ಮುಂದಿನ ವಾರ ರಾಜ್ಯಕ್ಕೆ ಚುನಾವಣಾ ಉಸ್ತುವಾರಿಗಳು ಬರಲಿದ್ದಾರೆ. ಮನ್ಸುಕ್ ಮಾಂಡವೀಯಾ, ವಿನೋದ್ ತಾವಡೆ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಇಬ್ಬರು ವೀಕ್ಷಕರು ಬಂದ ಹೋದ ಬಳಿಕ ಕೇಂದ್ರದ ಟೀಮ್(Central team) ರಾಜ್ಯಕ್ಕೆ ಬರಲಿದೆ. ಪ್ರತಿ ಲೋಕಸಭೆ ಕ್ಷೇತ್ರಕ್ಕೆ ಕೇಂದ್ರ ಬಿಜೆಪಿ ಸಚಿವರೇ ಉಸ್ತುವಾರಿಯಾಗಲಿದ್ದಾರೆ. ಕೇಂದ್ರ ಸಚಿವರ ಟೀಮ್ ಹಾಲಿ ಸಂಸದರ ಕ್ಷೇತ್ರಕ್ಕೆ ಬಂದು ಮಾಹಿತಿ ಕಲೆ ಹಾಕಲಿದೆ.
ಇದನ್ನೂ ವೀಕ್ಷಿಸಿ: ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿದ ಮಹಿಳೆ: ಪ್ರಾಣ ಉಳಿಸಿದ ಪೊಲೀಸ್ ಕಾನ್‌ಸ್ಟೇಬಲ್