ಕರ್ನಾಟಕ ಕುರುಕ್ಷೇತ್ರದಲ್ಲಿ ದಿಗ್ಗಜರ ಪ್ರಚಾರ : ರಾಜ್ಯಕ್ಕೆ ಮತ್ತೆ 'ರಾಗಾ' ಎಂಟ್ರಿ

Apr 27, 2023, 10:22 AM IST

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕೂಡ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಾಯಕರು ಪ್ರಚಾರ ನಡೆಸಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ನಟ ಸುದೀಪ್‌, ರಾಹುಲ್‌ ಗಾಂಧಿ ಕ್ಯಾಂಪೇನ್‌ ಮಾಡಲಿದ್ದಾರೆ. ಸಿಎಂ ತವರು ಕ್ಷೇತ್ರವಾದ ಶಿಗ್ಗಾವಿಯ ತಡಸ, ಕುನ್ನೂರು, ದುಂಡಸಿ, ಯತ್ತಿನಹಳ್ಳಿ, ಕೋಣನಕೇರಿ, ಅಂದಲಗಿ, ಹೋತನಹಳ್ಳಿಯಲ್ಲಿ ಸಿಎಂ ಪ್ರಚಾರ ಮಾಡಲಿದ್ದಾರೆ. ನಿನ್ನೆ ದಾವಣಗೆರೆ ಸುತ್ತಮುತ್ತ ಸಿಎಂ ಭರ್ಜರಿ ಪ್ರಚಾರ ಮಾಡಿದ್ದರು.  ಕಿಚ್ಚ ಸುದೀಪ್‌ ಹಾವೇರಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಇಂದು ರಾಹುಲ್‌ ಗಾಂಧಿ ರಾಜ್ಯಕ್ಕೆ ಬರಲಿದ್ದು, ಮಂಗಳೂರಿನ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಲಿದ್ದಾರೆ. ಈ ವೇಳೆ ಕರಾವಳಿ ಭಾಗದ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದು, ಮೀನುಗಾರರ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ: News Hour: ಬಿಜೆಪಿ ಪಾಲಿಗೆ ಸವಾಲಿನ ಕ್ಷೇತ್ರವಾದ ಅಥಣಿ, ಹುಬ್ಬಳ್ಳಿ ಸೆಂಟ್ರಲ್‌!