ಎಕ್ಸಿಟ್ ಪೋಲ್‌ನಲ್ಲಿ ಕೈಗೆ ಬಿಗ್ ಶಾಕ್, ಮೈತ್ರಿ ರಾಕ್..! ಧೂಳೆಬ್ಬಿಸಲಿದ್ಯಂತೆ ಕಮಲದಳ ಮೈತ್ರಿಕೂಟ..ಕಾಂಗ್ರೆಸ್‌ಗೆ ಲೋಕಾಘಾತ..?

ಎಕ್ಸಿಟ್ ಪೋಲ್‌ನಲ್ಲಿ ಕೈಗೆ ಬಿಗ್ ಶಾಕ್, ಮೈತ್ರಿ ರಾಕ್..! ಧೂಳೆಬ್ಬಿಸಲಿದ್ಯಂತೆ ಕಮಲದಳ ಮೈತ್ರಿಕೂಟ..ಕಾಂಗ್ರೆಸ್‌ಗೆ ಲೋಕಾಘಾತ..?

Published : Jun 02, 2024, 03:18 PM IST

ರಾಜ್ಯದಲ್ಲಿ ಮತ್ತೆ ಬಿಜೆಪಿ ದಿಗ್ವಿಜಯದ ಸುಳಿವು ನೀಡಿದ ಎಕ್ಸಿಟ್ ಪೋಲ್..!
ಎಲ್ಲಾ ಮತಗಟ್ಟೆ ಸಮೀಕ್ಷೆಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸಿಂಗಲ್ ಡಿಜಿಟ್..!
ಕರ್ನಾಟಕದಲ್ಲಿ ಕಾಂಗ್ರೆಸ್ ಕೈ ಹಿಡಿಯಲಿಲ್ವಾ "ಪಂಚ ಗ್ಯಾರಂಟಿ" ಪಂಚ್..?
ವಿಧಾನಸಭಾ ಸೋಲಿಗೆ ಲೋಕಸಭೆಯಲ್ಲಿ ಸೇಡು ತೀರಿಸಿಕೊಳ್ಳುತ್ತಾ ಬಿಜೆಪಿ..?

ಚುನಾವಣೆಗೂ ಮುಂಚೆ ಕರ್ನಾಟಕದ ರಣಕಲಿಗಳು ನುಡಿದಿದ್ದ ಭವಿಷ್ಯವಿದು. 28ರಲ್ಲಿ 20ಸ್ಥಾನಗಳನ್ನು ಗೆಲ್ಲೇದಾಗಿ ಜೋಡೆತ್ತುಗಳು ಶಪಥ ಮಾಡಿದ್ದಾರೆ. 28ಕ್ಕೆ 28ರಲ್ಲೂ ಗೆಲ್ಲೋದು ನಾವೇ ಅಂತ ವಿಜಯೇಂದ್ರ ಪ್ರತಿಜ್ಞೆ. 23 ಸ್ಥಾನಗಳಲ್ಲಿ ನಾವು ಗೆಲ್ಲೋದು ಶತಸಿದ್ಧ ಅನ್ನೋ ರಾಜಾಹುಲಿ ಪ್ರತಿಜ್ಞೆ. ಇದು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ನಡೆದ ಚುನಾವಣೆ. ಭಾರತದ ಮುಂದಿನ ಪ್ರಧಾನಿ ಯಾರು ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟ ಚುನಾವಣೆ. ಸತತ ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿ ಪಟ್ಟಕ್ಕೇರ್ತಾರಾ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗೋದು ಇಲ್ಲೇ.  ಸಿದ್ದರಾಮಯ್ಯ(Siddaramaiah)-ಡಿಕೆ ಶಿವಕುಮಾರ್ ಜೋಡಿ ನಾಯಕತ್ವದ ಕಾಂಗ್ರೆಸ್ ಪಕ್ಷ, ಮತ್ತೊಂದ್ಕಡೆ ಯಡಿಯೂರಪ್ಪ-ವಿಜಯೇಂದ್ರ-ಕುಮಾರಸ್ವಾಮಿ ನೇತೃತ್ವದ ಬಿಜೆಪಿ(BJP)-ಜೆಡಿಎಸ್(JDS) ಮೈತ್ರಿಕೂಟ. ಅಧಿಕಾರದಲ್ಲಿರೋ ಕಾಂಗ್ರೆಸ್(Congress) ಪಕ್ಷಕ್ಕೆ ವಿಧಾನಸಭಾ ಚುನಾವಣೆಯ ಪ್ರಚಂಡ ಗೆಲುವನ್ನು ಲೋಕಸಭಾ ಚುನಾವಣೆಯಲ್ಲೂ(Lok Sabha elections 2024) ಮುಂದುವರಿಸೋ ವಿಶ್ವಾಸ. ಅದಕ್ಕಾಗಿ ಪಂಚ ಗ್ಯಾರಂಟಿಗಳನ್ನೇ ಅಸ್ತ್ರವಾಗಿ, ಗುರಾಣಿಯಾಗಿ ಹಿಡಿದುಕೊಂಡು ರಣರಂಗಕ್ಕೆ ಧುಮುಕಿತ್ತು ಕಾಂಗ್ರೆಸ್ ಮಹಾಸೇನೆ. ಕಾಂಗ್ರೆಸ್ ಪಕ್ಷದ ನಾಗಾಲೋಟಕ್ಕೆ ಬ್ರೇಕ್ ಹಾಕಲೆಂದೇ ರಾಜ್ಯದಲ್ಲಿ ಎದ್ದು ನಿಂತದ್ದು ಕಮಲದಳ ಮೈತ್ರಿವ್ಯೂಹ. ತ್ರಿಕೋನ ಸ್ಪರ್ಧೆಯಾದ್ರೆ ಕೈ ಪಾಳೆಯದ ದಿಗ್ವಿಜಯ ಖಚಿತ ಅನ್ನೋ ಸತ್ಯವನ್ನು ಅರಿತುಕೊಂಡಿದ್ದ ಬಿಜೆಪಿ-ಜೆಡಿಎಸ್ ನಾಯಕರು, ಶತ್ರುವಿನ ಶತ್ರು ಮಿತ್ರ ಅನ್ನೋ ಸೂತ್ರದಡಿ ಪರಸ್ಪರ ಕೈ ಜೋಡಿಸಿ ರಣರಂಗದ ಚದುರಂಗದಲ್ಲಿ ಜೋಡಿ ದಾಳ, ದೋಸ್ತಿ ದಾಳವನ್ನು ಉರುಳಿಸಿ ಬಿಟ್ಟಿದ್ರು.

ಇದನ್ನೂ ವೀಕ್ಷಿಸಿ:  ಭವಿಷ್ಯ ನುಡಿದ ಕಾಲ ಭೈರವೇಶ್ವರನ ಶ್ವಾನ: ಮೋದಿ, ರಾಹುಲ್ ಗಾಂಧಿ ಪೋಟೊದಲ್ಲಿ ಸೆಲೆಕ್ಟ್ ಮಾಡಿದ್ದು ಯಾರನ್ನು?

19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
21:37ಬಂಡೆ ಬ್ರದರ್ಸ್ ವಚನ ವಜ್ರಾಯುಧ: ಡಿಕೆ–ಸಿದ್ದರಾಮಯ್ಯ ಪವರ್ ಪಾಲಿಟಿಕ್ಸ್ ನಿರ್ಣಾಯಕ ಹಂತಕ್ಕೆ!
Read more