Apr 21, 2024, 5:53 PM IST
ಬೆಂಗಳೂರು: ರಾಜ್ಯ ಕಾಂಗ್ರೆಸ್(Congress) ಸರ್ಕಾರ ಪೂರ್ವ ಸಿದ್ದತೆ ಇಲ್ಲದ ಗ್ಯಾರೆಂಟಿ(Gguarantee)ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡಿದ್ದು, ಆರ್ಥಿಕ ವಿಚಾರದಲ್ಲಿ ಹತಾಶರಾಗಿ ತೀರ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ. ನಾಲ್ಕು ಲಕ್ಷಕೋಟಿ ತೆರಿಗೆ ಕೊಡುತ್ತೇವೆ ಎನ್ನುತ್ತಾರೆ. ಆದರೆ, ಕೇಂದ್ರದ ನೇರ ತೆರಿಗೆ, ರಾಜ್ಯಕ್ಕೆ ನೀಡುವ ತೆರಿಗೆ ಪಾಲಿಮ ಹಂಚಿಕೆ ಪಾಲಿನಲ್ಲಿ ಬರುವುದಿಲ್ಲ. ಅದು ಪ್ರಥಮ ಪ್ರಧಾನಿ ಜವಾಹರಲಾಲ ನೆಹರೂ ಅವರ ಕಾಲದಿಂದ ಇದೆ. ಈ ಪದ್ದತಿ ಜಿಎಸ್‌ಟಿಗೆ ಮಾತ್ರ ಅನ್ವಯವಾಗತ್ತದೆ ಎಂದರು. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಜೊತೆಗೆ ರಾಜ್ಯ ಸರ್ಕಾರವೂ ರೈತರಿಗೆ 4 ಸಾವಿರ ರೂ. ನೀಡುತ್ತಿತ್ತು. ರಾಜ್ಯ ಸರ್ಕಾರ ಅದನ್ನು ಕಡಿತ ಮಾಡಿ, ರೈತರಿಗೆ ಚಂಬು ಕೊಟ್ಟಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ 13 ಲಕ್ಷ ವಿದ್ಯಾರ್ಥಿಗಳಿ ಸ್ಕಾಲರ್ ಶಿಪ್ ಕೊಡಲಾಗಿತ್ತು, ಅದನ್ನು ನಿಲ್ಲಿಸಿದ್ದಾರೆ. ದಲಿತ( Dalits) ಸಮುದಾಯಕ್ಕೆ ಮೀಸಲಿಟ್ಟಿದ್ದ ಎಸ್ಸಿಪಿ ಟಿಎಸ್ಪಿಯ 11380 ಕೋಟಿ ಎಸ್ಸಿಎಸ್ಟಿ ಅನುದಾನವನ್ನ ಗ್ಯಾರಂಟಿಗೆ ಬಳಕೆ ಮಾಡಿಕೊಂಡಿದ್ದಾರೆ. ಇದೆಲ್ಲ ಮಾಡಿ ರಾಜ್ಯದ ಜನತೆಗೆ ಚೊಂಬು ಕೊಟ್ಟಿದ್ದು ರಾಜ್ಯ ಸರ್ಕಾರ ಎಂದು ಆರೋಪಿಸಿದರು.
ಇದನ್ನೂ ವೀಕ್ಷಿಸಿ: Double Murder: 25 ವರ್ಷದ ಯುವತಿ..46 ವರ್ಷದ ಅಂಕಲ್..!ಲವ್ವರ್ಸ್ ಡೆಡ್..ಅಮ್ಮ ಇನ್ ಜೈಲ್..!