ಬಬಲಾದಿ ಮುತ್ಯಾರ ಬೆಂಕಿ ಭವಿಷ್ಯಕ್ಕೆ ತಬ್ಬಿಬ್ಬಾದವರು ಯಾರು? ಭವಿಷ್ಯ ನುಡಿದ ಮೂರೇ ದಿನದಲ್ಲಿ ರಾಜಕಾರಣದಲ್ಲಿ ಗಢಗಢ!

ಬಬಲಾದಿ ಮುತ್ಯಾರ ಬೆಂಕಿ ಭವಿಷ್ಯಕ್ಕೆ ತಬ್ಬಿಬ್ಬಾದವರು ಯಾರು? ಭವಿಷ್ಯ ನುಡಿದ ಮೂರೇ ದಿನದಲ್ಲಿ ರಾಜಕಾರಣದಲ್ಲಿ ಗಢಗಢ!

Published : Mar 25, 2024, 09:55 AM IST

‘ಉತ್ತಮ ಅರ್ಹ ವ್ಯಕ್ತಿಯ ಮರ್ದನ’ ಭಯಾನಕ ಬೆಂಕಿ ಭವಿಷ್ಯ
ಬೆಂಕಿ ಭವಿಷ್ಯ ನುಡಿದ ಮೂರೇ ದಿನದಲ್ಲಿ ಅಲ್ಲೋಲ ಕಲ್ಲೋಲ..!
ಅರ್ಹ ವ್ಯಕ್ತಿಗಳಿಗೆ ಸಿಗಲಿಲ್ಲ ಟಿಕೆಟ್‌, ಬಂಡಾಯವೆದ್ದ ಉತ್ತಮರು..!

ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು ಮಹಾಭಾರತ ಅಖಾಡ ರಂಗೇರಿದೆ. ಸೆಂಟ್ರಲ್‌ ದಂಗಲ್‌ ನಲ್ಲಿ ಯಾರು ಗೆಲ್ತಾರೆ? ಯಾರಿಗೆ ಕಾದಿದೆ ಸೋಲು? ಎನ್ನುವ ಲೆಕ್ಕಾಚಾರಗಳೂ ಜೋರಾಗಿವೆ. ಆದ್ರೆ ಈ ನಡುವೆ ಬೆಂಕಿ ಬಬಲಾದಿ ಮಠದಲ್ಲಿ(Babaladi Math) ನುಡಿದ ಅದೊಂದು ಕೆಂಡದಂತ ರಾಜಕೀಯ ಭವಿಷ್ಯ(Predictions) ಚುನಾವಣಾ ಅಖಾಡದಲ್ಲಿಯೇ ಬಿರುಗಾಳಿ ಎಬ್ಬಿಸಿದೆ. ಲೋಕಸಭಾ ಚುನಾವಣೆ (Loksabha ELEction)ಘೋಷಣೆಯಾಗಿದೆ. ಎಲೆಕ್ಷನ್‌ ಡೇಟ್‌ ಸಹ ಅನೌನ್ಸ್‌ ಆಗಿದೆ. ಈ ನಡುವೆ ಜನರ ಒಲವು ಯಾರ ಕಡೆಗೆ ಎನ್ನುವ ಲೆಕ್ಕಾಚಾರಗಳು ಜೋರಾಗಿವೆ. ಜನರ ಒಲವು ರಾಷ್ಟ್ರದ ಹಿತವನ್ನ ಮುಂದಿಟ್ಟು ಮತಬೇಟೆಗೆ ಇಳಿದಿರುವ ಮೋದಿ(Narendra Modi) ಕಡೆಗೋ, ಗ್ಯಾರಂಟಿ ಮುಂದಿಟ್ಟು ಜನರನ್ನ ಸೆಳೆಯುತ್ತಿರುವ ಕಾಂಗ್ರೆಸ್‌(Congress) ಕಡೆಗೋ ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಎಲ್ಲ ಕುತೂಹಲಗಳ ನಡುವೆ ದೇಶದಲ್ಲೀಗ ಎಲ್ಲೆಡೆ ಮೋದಿ ಹವಾ ಜೋರಾಗಿದೆ. ಹೀಗಾಗಿ, ಮೋದಿ ಕಡೆಗೆ ಜನರ ಒಲವಿದೆ ಎಂದು ಬಹುತೇಕರು ಮಾತನಾಡಿಕೊಳ್ತಿದ್ದಾರೆ. ಆದ್ರೆ, ಈ ಮಾತುಗಳ ನಡುವೆಯೇ ಕಾಲಜ್ಞಾನಕ್ಕೆ ಪ್ರಸಿದ್ಧಿ ಪಡೆದಿರುವ ಬೆಂಕಿ ಮಠ ಎಂಥಲೇ ಕರೆಯಿಸಿಕೊಳ್ಳುವ ಬಬಲಾದಿ ಮಠದಲ್ಲಿ ನುಡಿದ ಭವಿಷ್ಯ ರಾಜಕಾರಣಿಗಳನ್ನ ತಬ್ಬಿಬ್ಬು ಆಗೋ ಹಾಗೇ ಮಾಡಿದೆ. ಪ್ರತಿ ವರ್ಷ ಶಿವರಾತ್ರಿಯ 5ನೇ ದಿನಕ್ಕೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬೆಂಕಿ ಬಬಲಾದಿ ಮಠದಲ್ಲಿ ಕಾಲಜ್ಞಾನವನ್ನ ಓದಲಾಗುತ್ತದೆ. ಕಳೆದ 300 ವರ್ಷಗಳ ಹಿಂದೆ ಅವತಾರಿ ಪುರುಷ ಚಕ್ರವರ್ತಿ ಸದಾಶಿವ ಅಜ್ಜ ನುಡಿದ ಕಾಲಜ್ಞಾನವನ್ನ ಚಿಕ್ಕಯ್ಯಪ್ಪನವರು ತಾಮ್ರದ ಪುಸ್ತಕದಲ್ಲಿ ದಾಖಲಿಸಿಟ್ಟಿದ್ದಾರೆ. ಪ್ರತಿ ವರ್ಷ ಇಲ್ಲಿ ನಡೆಯುವ ಶಿವರಾತ್ರಿಯ ಜಾತ್ರೆಯ 5ನೇ ದಿನ ತಾಮ್ರದಲ್ಲಿ ದಾಖಲಿಸಿಟ್ಟಿರುವ ಕಾಲಜ್ಞಾನವನ್ನ ಬಬಲಾದಿ ಪೀಠದ ಈಗಿನ ಸಿದ್ದು ಮುತ್ಯಾ ಹೊಳಿಮಠ ಓದಿ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ಕಾಮದಹನದ ಹಿಂದಿನ ಉದ್ದೇಶವೇನು ? ಹೋಳಿ ಹಬ್ಬದ ಆಚರಣೆ ಮಾಡುವುದು ಏಕೆ?

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
23:34‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?
21:54ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
Read more