ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಪ್ರಜಾಪ್ರತಿನಿಧಿ ನೇಮಿಸ್ತಾರಾ?: ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದೇನು?

Jun 16, 2023, 1:11 PM IST

‘ಗೃಹ ಲಕ್ಷ್ಮಿ’ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಜನರಿಗೆ ಕಷ್ಟವಾಗಬಾರದು ಎಂಬ ಉದ್ದೇಶದಿಂದ ಚರ್ಚೆಯನ್ನು ನಡೆಸಿದ್ದೇವೆ. ಪ್ರಜಾಪ್ರತಿನಿಧಿ ಎಂದು ಒಂದು ಊರಲ್ಲಿ ಎನ್‌ರೋಲ್‌ ಮಾಡಿಕೊಂಡು ಅವರು ಈ ಯೋಜನೆ ಸಕ್ಸಸ್‌ ಕೈಜೋಡಿಸಬಹುದು ಅವರಿಗೆ ಹಣವನ್ನು ನೀಡಲಾಗುವುದು. ಈ ಯೋಜನೆ ಬಗ್ಗೆ ಚರ್ಚೆ ಮತ್ತು ಡಿಬೆಟ್‌ನನ್ನು ಮಾಡುತ್ತೇವೆ.ಸಂಪುಟ ಸಭೆಯಲ್ಲಿ ಹಿರಿಯ ಸದಸ್ಯರು ನೀಡಿದ ಸಲಹೆಗಳ ಹಿನ್ನೆಲೆ ಇನ್ನೂ 4-5 ದಿನಗಳ ಬಳಿಕ ಪೂರ್ಣ ಸಿದ್ಧತೆಯೊಂದಿಗೆ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು. ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸ್ವೀಕರಿಸಲು ನಿರ್ಧರಿಸಲಾಗಿದೆ. ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಹೇಳಿದರು.

ಇದನ್ನೂ ವೀಕ್ಷಿಸಿ: ವಿಧಾನಪರಿಷತ್‌ನ 3 ಸ್ಥಾನಗಳಿಗೆ ಚುನಾವಣೆ:ಕಾಂಗ್ರೆಸ್‌ನ ಮಾಸ್ಟರ್‌ ಪ್ಲ್ಯಾನ್‌ ಏನು?