ಸುತ್ತೂರು ತಪೋಭೂಮಿಯಲ್ಲಿ ಗೃಹ ಮಂತ್ರಿ..!
ರಾಜಕೀಯ ಸಂಚಲನ ಸೃಷ್ಟಿಸಿದ ಅಮಿತ್ ಶಾ..!
ಅಮಿತ್ ಶಾ ಭೇಟಿಯಿಂದ ಬಿಜೆಪಿಯಲ್ಲಿ ರಣೋತ್ಸಾಹ
ಅಮಿತ್ ಶಾ ಕರ್ನಾಟಕಕ್ಕೆ ಬಂದಿದ್ದಾರೆ. ಮೈಸೂರಿನಲ್ಲಿ(Mysore) ಟೆಂಪಲ್ ರನ್ ಮಾಡ್ತಾ ಇರೋ ಕೇಂದ್ರ ಗೃಹ ಮಂತ್ರಿ , ಲೋಕಸಭಾ ಚುನಾವಣೆಯ ರಣಕಾವನ್ನು ಹೆಚ್ಚಿಸಿದ್ದಾರೆ. ಬಿಜೆಪಿ(BJP) ಪಾಳಯದಲ್ಲಿ ಹೊಸ ಉತ್ಸಾಹ ಶುರುವಾಗಿದೆ. ಇನ್ನೊಂದು ಕಡೆ ಸಿದ್ದು ಭದ್ರಕೋಟೆ ಹಳೆ ಮೈಸೂರು ಭಾಗದಲ್ಲಿ ಅಮಿತ್ ಶಾ ಭೇಟಿಯಿಂದ ಆಗಬಲ್ಲ ರಾಜಕೀಯ ಏರುಪೇರಿನ ಚರ್ಚೆಯೂ ಆಗ್ತಾ ಇದೆ. ಲೋಕಸಭಾ(Loksabha)ಚುನಾವಣಾ ಕಾವು ದಿನೇ ದಿನೇ ಹೆಚ್ಚಾಗ್ತಾ ಇದೆ. ರಾಷ್ಟ್ರಾದ್ಯಂತ ಗೆಲುವು ಸೋಲಿನ ಲೆಕ್ಕಾಚಾರವೇ ಟ್ರೆಂಡಿಂಗ್ ಟಾಪಿಕ್.ರಾಜ್ಯದಲ್ಲೂ ಕೂಡ ಕಾಂಗ್ರೆಸ್ (Congress)ಅಧಿಕಾರದಲ್ಲಿ ಇರೋದ್ರಿಂದ ಲೋಕಸಭೆಯಲ್ಲಿ ಉತ್ತಮ ಪ್ರದರ್ಶನ ನೀಡೋಕೆ ಸಮರ ತಾಲೀಮು ನಡೆಸ್ತಾನೆ ಇದೆ. ಇನ್ನು ಬಿಜೆಪಿ ಪಕ್ಷವಂತೂ ಮೋದಿ ಜಪದ ಮೂಲಕವೇ ಚುನಾವಣೆಯನ್ನ ಎದುರಿಸೋಕೆ ಸಜ್ಜಾಗಿದೆ. ಈ ಮಧ್ಯೆ ಚುನಾವಣಾ ಚಾಣಕ್ಯ ಅಮಿತ್ ಶಾ ರಾಜ್ಯಕ್ಕೆ ಬಂದಿರೋದು ಅನೇಕ ರಾಜಕೀಯ ಲೆಕ್ಕಾಚಾರಗಳನ್ನ ಬದಲು ಮಾಡಿತಾ ಅನ್ನೋ ಅನುಮಾನ ಹುಟ್ಟಿಸಿದೆ. ಮೈಸೂರಿನಲ್ಲಿ ದೇವಸ್ಥಾನ ಹಾಗೂ ಸುತ್ತೂರು ಮಠಕ್ಕೆ ಅಮಿತ್ ಶಾ ಭೇಟಿ ಕೊಟ್ಟರು. ಜಗಜ್ಯೋತಿ ಬಸವಣ್ಣನ ಗುಣಗಾನ ಮಾಡಿದರು.
ಇದನ್ನೂ ವೀಕ್ಷಿಸಿ: Yogi Adityanath: ಎಲ್ಲೆಲ್ಲಿ ಶುರುವಾಗಲಿದೆ ಕಾನೂನು ಕುರುಕ್ಷೇತ್ರ..? ವಿಳಾಸವಿಲ್ಲದ ಯೋಗಿಯ ಪತ್ರ ತಲುಪಿದ್ದೆಲ್ಲಿಗೆ..?