Apr 2, 2024, 3:37 PM IST
ಬಂಡಾಯ ಸಾರಿದ್ದ ಈಶ್ವರಪ್ಪಗೆ ಅಮಿತ್ ಶಾ(Amit Shah) ಕರೆ ಮಾಡಿದ್ದು, ದೆಹಲಿಗೆ(Delhi) ಬರುವಂತೆ ಸೂಚಿಸಿದ್ದಾರೆ. ಅಮಿತ್ ಶಾ ಕರೆ ಬೆನ್ನಲ್ಲೇ ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಂಡಾಯ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ(KS Eshwarappa) ಮತ್ತೆ ಸ್ಪಷ್ಟನೆ ನೀಡಿದ್ದಾರೆ. ನಿಮ್ಮ ಸ್ಪರ್ಧೆ ಆಶ್ಚರ್ಯ ತಂದಿದೆ ಎಂದರು. ಮೋದಿ ಕುಟುಂಬ ರಾಜಕೀಯದ ವಿರುದ್ಧ ನಿಂತಿದ್ದಾರೆ. ಆದರೆ ರಾಜ್ಯ BJP ಅಪ್ಪ-ಮಕ್ಕಳ ಕೈಯಲ್ಲಿದೆ. ಕುಟುಂಬ ರಾಜಕಾರಣದಿಂದ ಬಿಜೆಪಿ(BJP) ಹೊರತರಬೇಕು. BJP ಶುದ್ಧೀಕರಣಕ್ಕಾಗಿ ಸ್ಪರ್ಧೆ ಎಂದು ಹೇಳಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ. ಹಿಂದುತ್ವ ಪರ ಹೋರಾಡುವ ನಾಯಕರ ಪರ ಸ್ಪರ್ಧೆ. ಬಂಡಾಯ ಸ್ಪರ್ಧೆ ಬೇಡ, ಬೇಡಿಕೆ ಈಡೇರಿಸೋಣ. ಅಮಿತ್ ಶಾ ಭರವಸೆಯ ಮಾತುಗಳನ್ನಾಡಿದ್ದಾರೆ. ಏನೇ ಆದರೂ ನಾನು ಬಂಡಾಯ ಸ್ಪರ್ಧೆ ಮಾಡ್ತೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: Katchatheevu Controversy: ಲೋಕಸಭೆ ಹೊತ್ತಲ್ಲಿ ಭುಗಿಲೆದ್ದ ‘ಕಚ್ಚತೀವು’ ವಿವಾದ : ತಮಿಳುನಾಡಲ್ಲಿ ಬಿಜೆಪಿಗೆ ಹೊಸ ಅಸ್ತ್ರ!