ಮತದಾನ ಆಯ್ತು .. ಶುರುವಾಯ್ತು ರಾಜಕೀಯ ಚದುರಂಗ: ನಿಜವಾಗುತ್ತಾವ ಸಮೀಕ್ಷೆಗಳು ?

May 11, 2023, 11:43 AM IST

ಮತದಾನವೇನೋ ಆಯ್ತು, ಇದರ ಬೆನ್ನಲೇ ಚುನಾವಣೋತ್ತರ ಸಮೀಕ್ಷೆಗಳು ಸಹ ಹೊರಬಂದಿವೆ. ಇದೀಗ ಮೂರು ಪಕ್ಷಗಳು ಅವಲೋಕನ ಮಾಡಲು ಶುರು ಮಾಡಿವೆ. ಸರ್ಕಾರ ರಚನೆಯ ಬಗ್ಗೆ ವಿವಿಧ ಆಯಾಮಗಳಲ್ಲಿ ಲೆಕ್ಕಾಚಾರ ಮಾಡುತ್ತಿವೆ.  ಇನ್ನೂ ಚುನಾವಣೋತ್ತರ ಸಮೀಕ್ಷೆಗಳನ್ನು ನೋಡುವುದಾದ್ರೆ, ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ, ಬಿಜೆಪಿಗೆ 62 ರಿಂದ 80 ಸ್ಥಾನ, ಕಾಂಗ್ರೆಸ್‌ಗೆ 122 ರಿಂದ 140 ಸ್ಥಾನ, ಜೆಡಿಎಸ್‌ಗೆ 20-25 ಸ್ಥಾನ ಬರಲಿದೆ ಎಂದು ಹೇಳಿದೆ. ನ್ಯೂಸ್ 24/ಟುಡೇಸ್‌ ಚಾಣಕ್ಯ ಸಮೀಕ್ಷೆ ಪ್ರಕಾರ, ಬಿಜೆಪಿ-92, ಕಾಂಗ್ರೆಸ್‌-120, ಜೆಡಿಎಸ್‌-12, ಇತರೆ -0, ಸುವರ್ಣ ನ್ಯೂಸ್‌ ಮತಗಟ್ಟೆ ಸಮೀಕ್ಷೆ ಪ್ರಕಾರ, ಬಿಜೆಪಿಗೆ 94ರಿಂದ 117, ಕಾಂಗ್ರೆಸ್‌ಗೆ 91-106, ಜೆಡಿಎಸ್‌ಗೆ 14ರಿಂದ 24 ಸ್ಥಾನ ಬರಲಿದೆ ಎಂದು ಹೇಳಿದೆ. 

ಇದನ್ನೂ ವೀಕ್ಷಿಸಿ: ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ, ನಾನು ಜನರ ನಾಡಿಮಿಡಿತ ಅರ್ಥ ಮಾಡಿಕೊಂಡಿರುವುದು ಸರಿಯಿದೆ: ಸಿದ್ದರಾಮಯ್ಯ