Panchanga: ಇಂದು ಯಮದ್ವಿತೀಯ, ಬ್ರಾತೃತ್ವ ಆಚರಿಸಿ..

Oct 27, 2022, 9:32 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಗುರುವಾರ, ದ್ವಿತೀಯಾ ತಿಥಿ, ವಿಶಾಖಾ ನಕ್ಷತ್ರ.
ಈ ದಿನವನ್ನು ಯಮದ್ವಿತೀಯ ಎನ್ನಲಾಗುತ್ತದೆ. ಈ ದಿನ ಯಮರಾಜ ತನ್ನ ಸಹೋದರಿ ಯಮಿಯ ಮನೆಗೆ ಹೋಗಿ ಔತಣ ಸ್ವೀಕರಿಸಿ ಸಂತಸ ಪಟ್ಟ ದಿನ. ಆ ನೆನಪಿನಲ್ಲಿ ಈಗಲೂ ಸಹೋದರರು ಸಹೋದರಿಯ ಮನೆಗೆ ಹೋಗಿ ಔತಣ ಸ್ವೀಕರಿಸುತ್ತಾರೆ. ಇದರಿಂದ ಬ್ರಾತೃತ್ವ ಹೆಚ್ಚುತ್ತದೆ. ಇದಲ್ಲದೆ ಇಂದಿನ ಮತ್ತೊಂದು ವಿಶೇಷವೆಂದರೆ ಹಾಸನಾಂಬೆ ದೇವಾಲಯ ದರ್ಶನ ಇಂದು ಕೊನೆಯಾಗುತ್ತಿದೆ. ದಿನವಿಶೇಷದ ಜೊತೆಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. 
 
ಹಾಸನ: ಸಂಭ್ರಮದ ಹಾಸನಾಂಬೆ-ಸಿದ್ದೇಶ್ವರ ಜಾತ್ರಾ ಮಹೋತ್ಸವ, ಇಂದು ಮಧ್ಯಾಹ್ನ 12ಕ್ಕೆ ದೇಗುಲ ಬಂದ್‌