ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಗುರುವಾರ, ನವಮಿ ತಿಥಿ, ಪೂರ್ವಾಷಾಢ ನಕ್ಷತ್ರ.
ಇಂದು ಬುಧ ತನ್ನ ನೀಚ ರಾಶಿಗೆ ಪರಿವರ್ತನೆ ಹೊಂದುತ್ತಿದ್ದಾನೆ. ಇದರಿಂದ ವ್ಯತಿರಿಕ್ತ ಪರಿಣಾಮಗಳೇ ಹೆಚ್ಚು. ಬುಧ ಬುದ್ಧಿ, ಮಾತು, ತಾರ್ಕಿಕತೆಯ ಅಧಿಪತಿ. ಅವನು ಬಲಹೀನನಾದಾಗ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಕಡಿಮೆಯಾಗಬಹುದು, ದೊಡ್ಡವರಲ್ಲಿ ಮಾತು ತಪ್ಪಬಹುದು ಇತ್ಯಾದಿ ಪರಿಣಾಮಗಳು ಕಂಡುಬರುತ್ತವೆ ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ.