Panchang: ಇಂದು ಮಾಘ ಪೌರ್ಣಮಿ, ಸ್ನಾನ ದಾನಗಳಿಂದ ಪುಣ್ಯ ಸಂಚಯನ

Feb 5, 2023, 8:49 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಭಾನುವಾರ, ಪೌರ್ಣಮಿ ತಿಥಿ,ಪುಷ್ಯ ನಕ್ಷತ್ರ.  

ಇಂದು ಮಾಘ ಪೌರ್ಣಮಿ. ಇದೊಂದು ಉತ್ಕೃಷ್ಟ ಕಾಲ. ಏಕೆಂದರೆ ಮಾಘ ಮಾಸ ಸ್ನಾನಕ್ಕೆ ಪ್ರಾಮುಖ್ಯತೆ ಇದೆ. ಸೂರ್ಯನ ಕಿರಣಗಳು ಬಿದ್ದ ಈ ಮಾಸದ ನೀರಿನ ಸ್ನಾನ ಉತ್ತಮ ಆರೋಗ್ಯ ತರುತ್ತದೆ. ಮಾಘ ಪೌರ್ಣಮಿಯ ಸ್ನಾನದಿಂದ ಆರೋಗ್ಯ ಉತ್ತಮವಾಗುತ್ತದೆ. ಈ ಸಮಯದಲ್ಲಿ ಕಂಬಳಿ, ಉಣ್ಣೆ ಬಟ್ಟೆಗಳ ದಾನ, ಎಳ್ಳು ದಾನ ಶ್ರೇಷ್ಠವಾಗಿದೆ ಎನ್ನುತ್ತಾರೆ  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 

ವಾರ ಭವಿಷ್ಯ: ವಿತ್ತೀಯ ಸಮಸ್ಯೆಗಳಿಂದ ತುಲಾ ಕಂಗಾಲು, ಉಳಿದ ರಾಶಿಗಳಿಗೆ ಈ ವಾರ ಹೇಗಿರಲಿದೆ?