ಖೇಲ್ ರತ್ನ ಪ್ರಶಸ್ತಿಗೆ ಧ್ಯಾನ್‌ ಚಂದ್ ಹೆಸರಿಟ್ಟಿರುವುದು ಖುಷಿಕೊಟ್ಟಿದೆ: ಶ್ರೀಜೇಶ್

Aug 17, 2021, 6:00 PM IST

ನವದೆಹಲಿ(ಆ.17): ಸ್ವಾತಂತ್ರ್ಯ ದಿನಾಚರಣೆಯ ಮರು ದಿನ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರು ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿ ನರೇಂದ್ರ ಮೋದಿ ಜತೆ ಆಪ್ತ ಸಂವಾದ ನಡೆಸಿದ್ದಾರೆ. ಇದೀಗ ಭಾರತ ಪುರುಷರ ಹಾಕಿ ತಂಡದ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಪ್ರಧಾನಿ ಅವರೊಂದಿಗೆ ಮಾತುಕತೆಯ ಖುಷಿಯ ಕ್ಷಣವನ್ನು ಏಷ್ಯಾನೆಟ್‌ ನ್ಯೂಸ್‌ ಜತೆ ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಜತೆ ಮುಕ್ತವಾಗಿ, ಆಪ್ತವಾಗಿ ಮಾತನಾಡಿದರು. ಇಡೀ ದೇಶವೇ ನಿಮ್ಮ ಸಾಧನೆಯನ್ನು ಹೆಮ್ಮೆಪಡುತ್ತಿದೆ ಎಂದಾಗ ನಮಗೆಲ್ಲರಿಗೂ ಖುಷಿಯಾಯಿತು ಎಂದು ಶ್ರೀಜೇಶ್ ಹೇಳಿದ್ದಾರೆ. ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಸಾಧನೆ ಮಾಡಿದೆ.

ನೀವೆಲ್ಲರೂ ರೋಲ್ ಮಾಡೆಲ್ಸ್‌: ಪ್ಯಾರಾಥ್ಲೀಟ್‌ಗಳನ್ನು ಹುರಿದುಂಬಿಸಿದ ಪ್ರಧಾನಿ ಮೋದಿ

ಇದೇ ವೇಳೆ ಖೇಲ್‌ ರತ್ನ ಪ್ರಶಸ್ತಿಗೆ ಹಾಕಿ ದಿಗ್ಗಜ ಮೇಜರ್ ಧ್ಯಾನ್‌ ಚಂದ್ ಅವರ ಹೆಸರಿಟ್ಟಿರುವುದಕ್ಕೆ ಓರ್ವ ಆಟಗಾರನಾಗಿ ನನಗೆ ಖುಷಿ ಕೊಟ್ಟಿದೆ ಎಂದು ಶ್ರೀಜೇಶ್‌ ಹೇಳಿದ್ದಾರೆ. ಪಿ.ಆರ್. ಶ್ರೀಜೇಶ್ ಸಂಪೂರ್ಣ ಮಾತು ಇಲ್ಲಿದೆ ನೋಡಿ