ಶತಮಾನದ ಸೆಲ್ಫಿ: ದಿಗ್ಗಜರ ನಡುವೆ ಪೋಸ್ ಕೊಟ್ಟ ಭಾರತೀಯ ಯುವಕ

Sep 23, 2019, 11:38 AM IST

ಟೆಕ್ಸಾಸ್(ಸೆ.23): ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಟೆಕ್ಸಾಸ್’ನಲ್ಲಿ ’ಹೌಡಿ ಮೋದಿ’ ಸಮಾವೇಶದಲ್ಲಿ ಭಾಗವಹಿಸಿ ಸಾವಿರಾರು ಅನಿವಾಸಿ ಭಾರತೀಯರೆದುರು ಮಾತನಾಡಿದರು. ಮೋದಿಗೆ ಭಾರತೀಯ ಸಂಸ್ಕೃತಿಯ ಮೂಲಕವೇ ವೇದಿಕೆಗೆ ಕರೆತರಲಾಯಿತು. ಮೋದಿ, ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಟ್ಟಾಗಿ ವೇದಿಕೆಗೆ ಬರುವಾಗ ಭಾರತೀಯ ಯುವಕನೊಬ್ಬ ಟ್ರಂಪ್ ಬಳಿ ಸೆಲ್ಫಿಗೆ ವಿನಂತಿಸಿದ. ಆಗ ಟ್ರಂಪ್-ಮೋದಿ ಜತೆಯಾಗಿ ನಿಂತು ಯುವಕನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಜಗತ್ತಿನ ಇಬ್ಬರು ಬಲಿಷ್ಠ ನಾಯಕರ ನಡುವೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅದೃಷ್ಟ ಆ ಯುವಕನದಾಯಿತು.