ಕಾಶ್ಮೀರದಲ್ಲಿ 370 ರದ್ದು ; ಯುದ್ಧೋನ್ಮಾದದಲ್ಲಿ ಪಾಕ್?

Aug 13, 2019, 10:32 AM IST

ವಿಶ್ವಗೆದ್ದ ಭಾರತದ ಪ್ರಧಾನಿಗೆ ಸಡ್ಡು ಹೊಡೆಯಲು ಸಜ್ಜಾಗಿದೆಯಾ ಪಾಕಿಸ್ತಾನ ಎಂಬ ಅನುಮಾನ ಎಡೆ ಮಾಡಿಕೊಟ್ಟಿದೆ ಪಾಕಿಸ್ತಾನದ ನಡೆ. ಮೋದಿ - ಅಮಿತ್ ಶಾ ಜೋಡಿಗೆ ಎದುರಾಯ್ತು ಮತ್ತೊಂದು ಅಗ್ನಿ ಪರೀಕ್ಷೆ. ಕಾಶ್ಮೀರದ ಜನತೆಗೆ ನೆಮ್ಮದಿ ಸಿಕ್ಕರೆ ಪಾಕಿಸ್ತಾನಕ್ಕೆ ಉರಿ ಬಿದ್ದಂತಾಗಿದೆ.ಆರ್ಟಿಕಲ್ 370 ರದ್ದು ವಿರುದ್ಧ ಸೇಡು ತೀರಿಸಿಕೊಳ್ಳಲು ಪಾಕ್ ಹಪಹಪಿಸುತ್ತಿದೆ. ಭಾರತ- ಪಾಕ್ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.