‘ಯಾಕ್ರೀ ಸಚಿವರ ಕಾರ್ ಒಳಗೆ ಬಿಟ್ರಿ..?’ SIಗೆ SP ಅನುಪ್ ಶೆಟ್ಟಿ ಕ್ಲಾಸ್

‘ಯಾಕ್ರೀ ಸಚಿವರ ಕಾರ್ ಒಳಗೆ ಬಿಟ್ರಿ..?’ SIಗೆ SP ಅನುಪ್ ಶೆಟ್ಟಿ ಕ್ಲಾಸ್

Published : Jan 02, 2020, 02:19 PM ISTUpdated : Jan 02, 2020, 04:48 PM IST

‘ಯಾಕ್ರೀ ಕಾರ್ ಒಳಗೆ ಬಿಟ್ರಿ..?’ ಎಸ್‌ಪಿ ಅನುಪ್‌ ಶೆಟ್ಟಿ ಎಸ್‌ಐ ಹಾಗೂ ಇತರ ಪೊಲೀಸ್‌ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

 

ತುಮಕೂರು(ಜ.02): ‘ಯಾಕ್ರೀ ಕಾರ್ ಒಳಗೆ ಬಿಟ್ರಿ..?’ ಎಸ್‌ಪಿ ಅನುಪ್‌ ಶೆಟ್ಟಿ ಎಸ್‌ಐ ಹಾಗೂ ಇತರ ಪೊಲೀಸ್‌ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆಯ ಜವಾಬ್ದಾರಿಯನ್ನು ಎಸ್‌ಪಿ ಅನುಪ್‌ ಶೆಟ್ಟಿಗೆ ವಹಿಸಲಾಗಿತ್ತು. ಯಾವುದೇ ವಾಹನಕ್ಕೂ ಮಠದ ಆವರಣ ಪ್ರವೇಶಿಸಲು ಅನುಮತಿ ಇರಲಿಲ್ಲ. ಹೀಗಿದ್ದರೂ ಸಚಿವ ವಿ. ಸೋಮಣ್ಣ ಅವರಿಗೆ  ಎಸ್ಐಗೆ ಎಸ್ಪಿ ಅನುಪ್ ಶೆಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ತುಮಕೂರು: ಪ್ರಧಾನಿ ಮೋದಿಗೆ ಭದ್ರತೆ, ಉಳಿದುಕೊಳ್ಳಲು ಸಕಲ ವ್ಯವಸ್ಥೆ

ಮೂರು ದಿನದಿಂದ ನಾವಿಲ್ಲಿ ಭದ್ರತೆ ಮಾಡ್ತಿದ್ದೀವಿ. ಕಾರ್ ಬಿಡಬೇಡಿ ಎಂದು 10 ಸಲ ಹೇಳಿದ್ದೀನಿ ಎಂದು ಸಚಿವ ಸೋಮಣ್ಣ ಕಾರು ಒಳ ಬಿಟ್ಟಿದ್ದಕ್ಕೆ ಎಸ್ಪಿ ಗರಂ ಆಗಿದ್ದಾರೆ. ಸಚಿವ ಸೋಮಣ್ಣ ಇದ್ದ ಕಾರು ಮಠದೊಳಗೆ ತೆರಳಿದ್ದು, ಕಾರು ಒಳಬಿಟ್ಟ ಎಸ್ಐಗೆ ಎಸ್ಪಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೋದಿ ಆಗಮನ ಹಿನ್ನೆಲೆಯಲ್ಲಿ ಮಠದ ಸುತ್ತ ಪೊಲೀಸರ ಸರ್ಪಗಾವಲಿದ್ದು, ಸಚಿವರ ಕಾರು ಒಳ ಬಿಟ್ಟಿದ್ದಕ್ಕೆ ಅನುಪ್ ಶೆಟ್ಟಿ ಗರಂ ಆಗಿದ್ದಾರೆ. ಪೋನ್ ಮಾಡಿ ಹೇಳುವ ಯೋಗ್ಯತೆ ಇಲ್ವಾ..? ಟೈಮ್ ಪಾಸ್ ಮಾಡಲು ಬರ್ತಿರಾ ಇಲ್ಲಿ. ನಮ್ಮನ್ನು ಯಾಕೆ ಕರೆಸಿದ್ರ, ನೀವೇ ಮಾಡಿಕೊಳ್ಳಿ ಬಂದೋಬಸ್ತ್. ನಾವಿಲ್ಲಿ ಕಸ ಗುಡಿಸಲು ಬಂದಿದ್ದೇವಾ..? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಆಗಮನ: ಮಠದ ಮಕ್ಕಳಿಗೆ ಬೇಗ ಊಟ

21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!