Jul 3, 2021, 3:22 PM IST
ಬೆಂಗಳೂರು (ಜು. 03): ನವಜಾತ ಹೆಣ್ಣು ಮಗುವಿಗೆ ನೇನು ಬಿಗಿದು ತಾಯಿ ಪರಾರಿಯಾಗಿರುವ ಹೃದಯ ವಿದ್ರಾವಕ ಘಟನೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಹೆಣ್ಣು ಮಗು ಹುಟ್ಟಿದ್ದರಿಂದ ಬೇಸರಗೊಂಡ ತಾಯಿ ಮಗು ಕುತ್ತಿಗೆಗೆ ಹಗ್ಗ ಬಿಗಿದು ಆಸ್ಪತ್ರೆ ಕಿಟಕಿಗೆ ನೇತು ಹಾಕಿ ಪರಾರಿಯಾಗಿದ್ದಾಳೆ. ವಾರ್ಡ್‌ಗೆ ಬಂದ ಸಿಬ್ಬಂದಿ, ದೃಶ್ಯ ನೋಡಿ ಆಘಾತಗೊಂಡಿದ್ದಾರೆ. ತಾಯಿಯನ್ನು ಪತ್ತೆ ಹಚ್ಚಲು ಸಿಸಿಟಿವಿ ಪರಿಶೀಲನೆ ಮಾಡಲಾಗುತ್ತಿದೆ.