Jan 11, 2023, 5:26 PM IST
ಕಳೆದ ಕೆಲವು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಹೆಚ್.ಎನ್ ವ್ಯಾಲಿ ಯೋಜನೆಯನ್ನು ತರಲಾಗಿತ್ತು. ಮೊದಲ ಹಂತವಾಗಿ ಈ ಯೋಜನೆ ಚಿಕ್ಕಬಳ್ಳಾಪುರ, ಗೌರಿಬಿದನೂರು ತಾಲೂಕಿನ ಕೆಲ ಗ್ರಾಮಗಳಿಗೆ ನೀಡಲಾಗಿತ್ತು. ಯೋಜನೆಯನ್ನು ಶಿಡ್ಲಘಟ್ಟ ಹಾಗೂ ಬಾಗೇಪಲ್ಲಿಗೆ ವಿಸ್ತರಣೆ ಮಾಡಲಾಗಿತ್ತು. ಬಾಗೇಪಲ್ಲಿ ತಾಲೂಕಿಗೆ ಸುಮಾರು 72 ಕೋಟಿ ಅನುದಾನವನ್ನು ಈ ಯೋಜನೆಯಲ್ಲಿ ನೀರು ಹರಿಸಲು ಸರ್ಕಾರ ಮೀಸಲಿಟ್ಟಿತ್ತು. ಅದರಂತೆ ಟೆಂಡರ್ ಕೂಡ ಮುಗಿದು ವರ್ಕ್ ಆರ್ಡರ್ ಕೂಡ ನೀಡಲಾಗಿತ್ತು. ಆದರೆ ಈ ಟೆಂಡರ್ ಅನ್ನು ಪಡೆದ ಗುತ್ತಿಗೆದಾರ ಕಳೆದ 5 ತಿಂಗಳಿಂದ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾನೆ. ಒಂದು ಮಹತ್ವಾಕಾಂಕ್ಷೆ ಯೋಜನೆಯನ್ನು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸದೆ ಇದ್ದರೆ ಇಷ್ಟೆಲ್ಲಾ ಆಗುತ್ತೆ ಅನ್ನೋದಕ್ಕೆ ಈ ಹೆಚ್ ಎನ್ ವ್ಯಾಲಿ ಬಾಗೇಪಲ್ಲಿಗೆ ನೀರು ಹರಿಸುವ ಯೋಜನೆಯೇ ಸಾಕ್ಷಿ. 18 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳಿಸಬೇಕು ಎಂಬ ಷರತ್ತನ್ನು ನೀಡಿದೆ ಸರ್ಕಾರ. ಆದರೆ ಟೆಂಡರ್ ಹಾಗೆ 6 ತಿಂಗಳು ಕಳೆದರೂ ಇನ್ನೂ ಕಾಮಗಾರಿ ಮಾತ್ರ ಶುರುವಾಗಿಲ್ಲ.