ಬೇಕಾ ಇಂತಹ ಸುಪುತ್ರರು? ಸಾಕಿ ಬೆಳೆಸಿದ ತಂದೆಯನ್ನು ಬೀದಿಗೆ ತಳ್ಳಿದ ಮಕ್ಕಳು!

Aug 29, 2019, 3:56 PM IST

ಬೆಂಗಳೂರು[ಆ.29]: ಬೆಂಗಳೂರಿನ ಲಗ್ಗೆರೆಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ತಮ್ಮನ್ನು ಸಾಕು, ಸಲಹಿ, ಮುದ್ದಾಗಿ ಬೆಳೆಸಿದ್ದ ತಂದೆಯನ್ನೇ ಮಕ್ಕಳು ಮನೆಯಿಂದ ಹೊರದಬ್ಬಿದ್ದಾರೆ. ತನ್ನ ಮನೆಯಲ್ಲಿ ಜಾಗವಿಲ್ಲದ 72 ವರ್ಷದ ವೃದ್ಧ ತಂದೆ ಸದ್ಯ ಬೀದಿ ಬದಿಯಲ್ಲಿ ಚಳಿಯಲ್ಲಿ ನಡುಗುತ್ತಾ ಅಸಹಾಯಕರಾಗಿ ಮಲಗಿದ್ದಾರೆ. ಸಾರ್ವಜನಿಕರು ಮಕ್ಕಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ವೃದ್ಧ ತಂದೆಯ ನೋವಿನ ಕತೆ ಇಲ್ಲಿದೆ