Narendra Modi: ರಾಷ್ಟ್ರ ರಾಜಕಾರಣದಲ್ಲಿ ಮರುಕಳಿಸುತ್ತಾ ಸುನಾಮಿ..? ಮೋದಿ ಪಡೆಗೆ ಯಾಕೆ ಬೇಕಂತೆ ಗೊತ್ತಾ 400 ಸ್ಥಾನ..?

May 26, 2024, 4:06 PM IST

 ನರೇಂದ್ರ ಮೋದಿ ಅವರಿಗೆ ಮತ್ತೆ ಅಧಿಕಾರಕ್ಕೆ ಬರೋದು ನಮ್ಮದೇ ಸರ್ಕಾರ ಅನ್ನೋ  ನಂಬಿಕೆ ದೃಢವಾಗಿದೆ. ಎಷ್ಟರ ಮಟ್ಟಿಗೆ ದೃಢವಾಗಿದೆ ಅಂದ್ರೆ, ಮೂರು ತಿಂಗಳ ಹಿಂದೆಯೇ, ಸಂಸತ್‌ನಲ್ಲೇ ಮೂರನೇ ಬಾರಿಗೆ ಅಧಿಕಾರ ಸ್ಥಾಪನೆ ಮಾಡೋ ಮಾತಾಡಿದ್ರು. ಅಷ್ಟೇ ಅಲ್ಲ, ಆ ಹೊತ್ತಿಗಾಗಲೇ ಈ ಬಾರಿ ನಾನ್ನೂರಕ್ಕೂ ಮೀರಿ ಅಂತ, ತಮಗೆ ತಾವೇ ಒಂದು ಟಾರ್ಗೆಟ್ ಕೂಡ ಇಟ್ಕೊಂಡ್ರು. ಆ ಕ್ಷಣದಿಂದಲೇ 2024ರಲ್ಲಿ 400 ಸ್ಥಾನಗಳನ್ನ ಗೆಲ್ಲೋ ಕಡೆ ಕೇಸರಿ ಪಾಳಯ ಲಕ್ಷ್ಯವಿಟ್ಟಿತ್ತು. ಆದ್ರೆ, ಇನ್ನೊಂದು ಕಡೆ ವಿಪಕ್ಷಗಳು ಮೋದಿ(Narendra modi) ಮತ್ತೆ 400 ಸ್ಥಾನ ಗೆಲ್ಲೋದು ಅಸಾಧ್ಯದ ಮಾತು. ಅದು ಹಗಲುಗನಸು.. ಆಡಳಿತದಲ್ಲಿರೋ ಮೋದಿ ಸರ್ಕಾರ 400 ಸ್ಥಾನ ಗೆಲ್ಲಲ್ಲ ಅಂತ ಹೇಳ್ತಲೇ ಇತ್ತು. ಮೋದಿ ಪಾಳಯ 400 ಸ್ಥಾನಗಳನ್ನ ಟಾರ್ಗೆಟ್ ಇಟ್ಕೊಳ್ತಿದ್ದ ಹಾಗೇ, ರಾಜಕೀಯ ಬಿರುಗಾಳಿ ಬೀಸಿತ್ತು.. ಅಷ್ಟೇ ಅಲ್ಲ, ಈ ಹಿಂದೆ ನಡೆದಿದ್ದ ಪಂಚರಾಜ್ಯ ಚುನಾವಣೆಗಲ್ಲಿ, ಬಿಜೆಪಿ(BJP) ಮೂರು ಸ್ಥಾನಗಳನ್ನ ಗೆದ್ದಿತ್ತಲ್ಲಾ, ಆ ಅಲೆ ಇದ್ದಾಗ, 400 ಸ್ಥಾನ ಗೆಲ್ಲೋದೇನೂ ಕಷ್ಟದ ಮಾತಾಗಿರ್ಲಿಲ್ಲ.. ಆದ್ರೆ, ಮೋದಿ ಅವರು 400 ಸ್ಥಾನಗಳನ್ನ ಗೆಲ್ಲೋ ಟಾರ್ಗೆಟ್ ಇಟ್ಕೊಂಡಿದ್ದೇ, ನಿಗೂಢ ರಣತಂತ್ರ ಅನ್ನೋ ಮಾತು ಕೆಲವರು ಹೇಳಿದ್ರು.. ಆ ಪೈಕಿ, ರಾಜಕೀಯ ತಜ್ಞ, ಪ್ರಶಾಂತ್ ಕಿಶೋರ್(Prashant Kishore) ಕೂಡ ಒಬ್ರು.

ಇದನ್ನೂ ವೀಕ್ಷಿಸಿ:  ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಯ್ತು ಕೇಸ್..! ಲಾಕಪ್ ಡೆತ್ ಆರೋಪ.. ಸ್ಟೇಷನ್ ಉಡೀಸ್!