ಮೇ 10ರಂದು ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಮಾಡಿಸಿದ್ದೇ. ನಾನೇ ಮಧ್ಯಸ್ಥಿಕೆ ವಹಿಸಿದ್ದೇ ಎನ್ನುವ ಮೂಲಕ ಟ್ರಂಪ್ ಕ್ರೆಡಿಟ್ ತೆಗೆದುಕೊಂಡಿದ್ರು. ಆದರೆ, ಅಲ್ಲಿಂದ ಮುಂದೆ ನಡೆದಿದ್ದೇ ಇಂಟ್ರಸ್ಟಿಂಗ್ ವಿಷಯ.
ಕಳೆದ ಜೂನ್15ರಿಂದ 17ರವರೆಗೆ ಕೆನಡಾದಲ್ಲಿ ಜಿ-7 ಶೃಂಗಸಭೆ ನಡೀತು.ಈ ಜಿ-7 ಶೃಂಗಸಭೆಗೆ ಆಹ್ವಾನವಿದ್ದ ಹಿನ್ನೆಲೆ ಪ್ರಧಾನಿ ಮೋದಿ ತೆರಳಿದ್ದರು. ಆದರೆ, ಡೊನಾಲ್ಡ್ ಟ್ರಂಪ್, ಮೋದಿ ಭೇಟಿಯಾಗದೇ ಮೊದಲೇ ನಿರ್ಗಮಿಸಿದ್ದರು. ಬಳಿಕ ಪ್ರಧಾನಿ ಮೋದಿಗೆ ಟ್ರಂಪ್ ನಿಂದ ಕರೆ ಬಂದಿತ್ತು. ಮೋದಿ ಹಾಗೂ ಟ್ರಂಪ್ ನಡುವೆ ಬರೋಬ್ಬರಿ 35 ನಿಮಿಷಗಳ ಕಾಲ ಸಂಭಾಷಣೆಯೂ ನಡೆದಿತ್ತು.