Ram Mandir: ಏನು ಹೇಳುತ್ತಿದೆ ತುಳಸಿದಾಸರ ಅಯೋಧ್ಯೆಯ ಇತಿಹಾಸ? ಅದೊಂದು ವರದಿಗಾಗಿ ವರ್ಷಗಟ್ಟಲೆ ಕಾದಿತ್ತೇಕೆ ಸರ್ಕಾರ..?

Jan 21, 2024, 1:30 PM IST

ಕರಸೇವಕರು, ಮಸೀದಿ ಧ್ವಂಸಗೊಳಿಸದ್ಮೇಲೆ, ಭಾರತದಲ್ಲಿ(India) ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯ್ತು. ನೂರಾರು, ಊರುಗಳಲ್ಲಿ ಧರ್ಮಸಂಘರ್ಷವಾಯ್ತು. ಜನರ ಬುದುಕೇ ದುಸ್ತರವಾಯ್ತು. ತಿಂಗಳುಗಟ್ಟಲೆ ತಲ್ಲಣದಲ್ಲೇ ಇದ್ದ ಭಾರತ, ಅಂತೂ ಒಂದು ಹಂತಕ್ಕೆ ಬಂದು ನೆಮ್ಮದಿಯ ನಿಟ್ಟುಸಿರೊ ಬಿಡೋ ಹೊತ್ತಿಗೆ, ಬಾಂಬೆಯ ಸರಣಿ ಸ್ಫೋಟ ಘಟಿಸಿತ್ತು. ಇದೆಕ್ಕೆಲ್ಲಾ ಕಾರಣವಾಗಿದ್ದ, 1992ರ ಡಿಸೆಂಬರ್ 6ರ ಆ ಘಟನೆ ಬಗ್ಗೆ, ವರದಿ ಪಡೆಯೋಕೆ ಸರ್ಕಾರ ಒಂದು ನಿರ್ಣಯಕ್ಕೆ ಬಂದಿತ್ತು. ಈ ಒನ್ ಮ್ಯಾನ್ ಪ್ಯಾನಲ್ ತಯಾರಿಸೋ ವರದಿಗೋಸ್ಕರ ಕೇಂದ್ರ ಸರಕಾರ ವ್ಯಯಿಸಿದ್ದು ಬರೋಬ್ಬರಿ 8 ಕೋಟಿ ರೂಪಾಯಿ. 400ಕ್ಕೂ ಹೆಚ್ಚು ಸಭೆ ನಡೆಸಿದ ಆಯೋಗ, ಘಟಾನುಘಟಿ ನಾಯಕರಾದ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್‌, ಬಿಜೆಪಿಯ(BJP) ನಾಯಕ ಎಲ್‌. ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ, ಕಲ್ಯಾಣ ಸಿಂಗ್‌, ಅಶೋಕ ಸಿಂಘಾಲ್‌, ಕಾಂಗ್ರೆಸ್‌ನ(Congress) ಅರ್ಜುನ್‌ ಸಿಂಗ್‌, ಮುಲಾಯಂ ಸಿಂಗ್‌ ಯಾದವ್ ಹೀಗೆ ಅನೇರನ್ನ ವಿಚಾರಣೆಗೊಳಪಡಿಸಿತ್ತು. ಅವರಿಂದ ವಿಷಯ ಸಂಗ್ರಹಿಸಿತ್ತು. ಒಟ್ಟು 68 ಮಂದಿಯನ್ನ ತಪ್ಪಿತಸ್ಥರು ಅಂತ ತಿಳಿಸಿತ್ತು.ಅಷ್ಟೇ ಅಲ್ಲ, ಮಸೀದಿ ಧ್ವಂಸಕ್ಕೆ ಆರ್‌ಎಸ್‌ಎಸ್‌ (RSS) ಹಾಗೂ ವಿಎಚ್‌ಪಿ ನೇರ ಕಾರಣ ಅಂತ ಹೇಳಿತ್ತು. ಆದ್ರೆ ಬಿಜೆಪಿ, ವಿಎಚ್ಪಿ ಮತ್ತು ಆರ್ಎಸ್ಎಸ್, ಇದು ವರದಿ ಅಲ್ಲ, ರಾಜಕೀಯ ಪಿತೂರಿ ಅಂತ ಹೇಳಿದ್ವು.

ಇದನ್ನೂ ವೀಕ್ಷಿಸಿ:  ಕಲ್ಲಿನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವುದು ಜೋಕ್‌ ಆಫ್‌ ದಿ ವರ್ಲ್ಡ್‌: ಪ್ರೊ.ಮಹೇಶ್ ಚಂದ್ರಗುರು