3ನೇ ವಾಗ್ದಾನ ಪೂರೈಸಲು ಮೋದಿ ತ್ರಿವಿಕ್ರಮ ಹೆಜ್ಜೆ: ಭಾರತದ ಭವಿಷ್ಯ ಬದಲಿಸುತ್ತಾ ಯುಸಿಸಿ..?

Jun 29, 2023, 11:17 AM IST

ಒಂದು ಮನೆ ಅಂದ್ಮೇಲೆ, ಎಲ್ರಿಗೂ ಒಂದೇ ಕಾನೂನು ಇರ್ಬೇಕು. ಒಬ್ಬರಿಗೊಂದು, ಇನ್ನೊಬ್ಬರಿಗೊಂದು ಇರ್ಬಾರ್ದು. ಈ ಮಾತು ಬೇರೆ ಯಾರಾದ್ರೂ ಹೇಳಿದ್ದಿದ್ರೆ ಅದೊಂದು ಚರ್ಚೆಯ ವಸ್ತು ಆಗ್ತಲೇ ಇರ್ಲಿಲ್ಲ. ಆದ್ರೆ ಇಂಥದ್ದೊಂದು ಮಾತಾಡಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ. ಅವರ ಆ ಒಂದು ಮಾತು, ಇಡೀ ದೇಶದಲ್ಲೇ ದೊಡ್ಡ ಸಂಚಲನ ಸೃಷ್ಟಿಸಿದೆ. ರಾತ್ರೋ ರಾತ್ರಿ ಸಭೆಗಳ ಮೇಲೆ ಸಭೆ ನಡೆಯೋ ಹಾಗೆ ಮಾಡಿದೆ. ವಿಪಕ್ಷಗಳಲ್ಲಿ ತಲ್ಲಣ ಸೃಷ್ಟಿಸಿದೆ.ಈ ಕತೆಯ ಹಿಂದೆಯೇ ರಾಜಕಾರಣ ಮತ್ತು ಭವಿಷ್ಯದ ನಿರ್ಮಾಣ ಎರಡೂ ನಿಂತಿದೆ.ಏಕರೂಪ ನಾಗರಿಕ ಸಂಹಿತೆ ಅನ್ನೋದು, ಬರೀ ಹೊಸದೊಂದು ಕಾನೂನಲ್ಲ, ಮತ್ತೊಂದು ನಿಯಮ ಅಲ್ಲ,ಅದು ಮೋದಿ ಸರ್ಕಾರದ ಮಹಾವಾಗ್ದಾನ. ಆದ್ರೆ ಅದು ಜಾರಿಯಾದ್ರೆ ಸಮಸ್ಯೆಯಾಗುತ್ತೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. 

ಇದನ್ನೂ ವೀಕ್ಷಿಸಿ: ತಿಂಗಳಿಗೆ 5 kg ಅಕ್ಕಿ+170 ರೂ.ಸಿದ್ದು ಹೊಸ ಪ್ಲ್ಯಾನ್‌: ಅನ್ನಭಾಗ್ಯ ಫಲಾನುಭವಿಗಳಿಗೆ ಅಕ್ಕಿ+ ದುಡ್ಡು..!