Dec 29, 2024, 12:37 PM IST
ಬೆಂಗಳೂರು(ಡಿ.29): ದುರಂತಗಳಿಗೆ ದೃಶ್ಯಗಳೇ ಸಾಕ್ಷಿ. ಸಾವು.. ನೋವು.. ನಲಿವು.. ಹೀಗೆ ಹಲವು ಭಾವನೆಗಳ ವಿಡಿಯೋ ಪ್ರಪಂಚದಲ್ಲೇ ನಮ್ಮ, ನಿಮ್ಮ ಬದುಕು ಸಾಗ್ತಿದೆ. ಕೆಲ ವಿಡಿಯೋಗಳು ಮನ ಕರಿಗಿಸುತ್ವೆ..ಕಣ್ಣಂಚಲ್ಲಿ ನೀರು ತರಿಸುತ್ವೆ. ಇನ್ನೂ ಕೆಲ ವಿಡಿಯೋಗಳು ಎದೆಯನ್ನ ಝಲ್ ಅನ್ನಿಸಿ ಬಿಡುತ್ವೆ. ಮಗದೊಂದಿಷ್ಟು ವಿಡಿಯೋಗಳು ಮುಖದಲ್ಲಿ ಸಣ್ಣದಾದ ಮಂದಹಾಸವನ್ನ ಮೂಡಿಸುತ್ವೆ. ಅಂತಹ ಒಂದಿಷ್ಟು ವಿಡಿಯೋಗಳೊಟ್ಟಿಗೆ ನಾವು ನಿಮ್ಮ ಮುಂದೆ ಬಂದಿದ್ದೇವೆ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್.
ಕೆಲವು ಅಪಘಾತದ ದೃಶ್ಯಗಳನ್ನ ನೊಡಿದ್ರೆ, ಮನೆಯಿಂದ ಹೊರಬಂದ ನಾವು, ಮತ್ತೆ ಮನೆಗೆ ವಾಪಾಸ್ ಹೋಗೋದೇ ಡೌಟು ಅನ್ನಿಸಿಬಿಡುತ್ತೆ. ಗ್ರಹಚಾರ ಒಂದು ಕೆಟ್ಟು ಬಿಟ್ರೆ ಹೇಗ್ ಬೇಕಾದ್ರೂ ಆಕ್ಸಿಡೆಂಟ್ ಆಗ್ಬಿಡುತ್ತೆ. ರೈಲು ಹತ್ಬೇಕಾದ್ರೂ ಅನಾಹುತ ಆಗ್ಬೋದು..ಸುಮ್ಮನೇ ನಡೆದುಕೊಂಡು ಹೋಗ್ಬೇಕಾದ್ರೂ ಆಪತ್ತು ಎದುರಾಗ್ಬೋದು. ಇನ್ನು ವಾಹನದಲ್ಲಿ ಹೋಗ್ಬೇಕಾದ್ರಂತೂ ಯಾವ ಕ್ಷಣದಲ್ಲಿ ಏನ್ ಬೇಕಾದ್ರೂ ಆಗ್ಬೋದು. ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗ್ತಿರುವ ಅಂತಹ ಒಂದಿಷ್ಟು ವಿಡಿಯೋಗಳಿವೆ. ನೋಡ್ಕೊಂಡು ಬರೋಣ ಬನ್ನಿ.
News Hour: ಮನಮೋಹನ್ ಸಿಂಗ್ ಅಜರಾಮರ, ಶುರುವಾಯ್ತು ಸ್ಮಾರಕ ಸಮರ!
ಹಿಮಾಚಲ ಪ್ರದೇಶದಲ್ಲಿ ಹಿಮದ ಆರ್ಭಟ ಇನ್ನೂ ಕಮ್ಮಿಯಾಗಿಲ್ಲ. ಜಾರುವ ಹಿಮದಲ್ಲಿ ಕಂಟ್ರೋಲ್ ಸಿಗದೇ ಪಿಕ್ಅಪ್ ವಾಹನವೊಂದು ಕಂದಕಕ್ಕೇ ಬಿದ್ದಿದೆ. ಇದು ಹಿಮದ ಕಥೆಯಾದ್ರೆ, ರಸ್ತೆಗಳಲ್ಲಿಯೇ ಹೊಡಿಬಡಿದಾಟ ಕೂಡ ಜೋರಾಗಿದೆ. Wwe ಮ್ಯಾಚ್ ರೇಂಜ್ನಲ್ಲಿ ಹೊಡೆದಾಡಿಕೊಂಡಿರೋ ಒಂದಿಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿವೆ.
ಕಣ್ಮುಚ್ಚಿ ಬಿಡೋದ್ರೋಳಗೆ ಕಳ್ಳನೊಬ್ಬ ಬಂಗಾರ ಎಗರಿಸಿದ್ದಾನೆ.. ಇನ್ನೊಂದು ಕಡೆ ಕೈನಲ್ಲಿ ಚಪ್ಪಲಿ ಹಿಡ್ಕೊಂಡು ಬರೋ ಕಳ್ಳರ ಹಾವಳಿ ಸೃಷ್ಟಿಸಿದ್ರೆ, ನಮ್ಮ ರಾಜ್ಯದಲ್ಲಿಯೇ ಚಡ್ಡಿಗ್ಯಾಂಗ್ ಸದ್ದು ಮಾಡಿದೆ. ಖತರ್ನಾಕ್ ಕಳ್ಳರ ವಿಡಿಯೋಗಳನ್ನ ತೋರಿಸ್ತೀವಿ.
ಬರೀ ಕಳ್ಳರಲ್ಲ.. ಇವರು ಖತರ್ನಾಕ್ ಕಳ್ಳರು.. ಸಿಸಿಟಿವಿಯಲ್ಲಿ ಸೆರೆಯಾಗಿರೋ ದೃಶ್ಯಗಳನ್ನ ನೋಡಿದ್ರೆ ನೀವು ಕೂಡ ಇದೇ ಮಾತು ಹೇಳ್ತೀರಿ. ಒಂದು ಕಡೆ ಚಡ್ಡಿಗ್ಯಾಂಗ್ ಭಯಹುಟ್ಟಿಸಿದ್ರೆ, ಇನ್ನೊಂದು ಕಡೆ ಚಪ್ಪಲಿ ಗ್ಯಾಂಗ್ ಹಾವಳಿ ಶುರುವಾಗಿದೆ. ಜೊತೆಗೆ ಇಲ್ಲೊಬ್ಬ ಖದೀಮ ಅದೆಷ್ಟು ವೇಗವಾಗಿ ಚಿನ್ನ ಕದ್ದಿದ್ದಾನೆ ಅಂದ್ರೆ, ಆತನ ಸ್ಪೀಡ್ ನೋಡಿದ್ರೆ, ನೀವು ಸಹ ಶಾಕ್ ಆಗ್ತೀರ.
Mandya: ಪೊಲೀಸ್ ಠಾಣೆಯಲ್ಲೇ ಪೊಲೀಸ್ ಕಾನ್ಸ್‌ಸ್ಟೇಬಲ್ ಕೆನ್ನೆಗೆ ಬಾರಿಸಿದ ಆರೋಪಿ!
ಆನೆ ಮೇಲೆ ಅಂಬಾರಿ ರೀತಿ, ಹುಲಿ ಕೂತು ಸವಾರಿ ಮಾಡಿರೋ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಆದ್ರೆ, ಅದರ ಅಸಲಿಯತ್ತೇ ಬೇರೆ ಇದೆ. ಹಾಗಿದ್ರೆ ಏನಾ ಅಸಲಿಯತ್ತು, ಆ ವಿಡಿಯೋದಲ್ಲಿ ಅಂತದ್ದು ಏನಿದೆ ಅನ್ನೋದನ್ನ ತೋರಿಸ್ತೀವಿ. ಆದ್ರೆ, ಅದಕ್ಕೂ ಮುನ್ನ ಮತ್ತೊಂದು ಸ್ಮಾಲ್ ಬ್ರೇಕ್.
ಸಂತೋಷ ಕ್ಷಣದಲ್ಲಿಯೇ ಹೃದಯ ನಿಂತಿದೆ. ಆನೆ ಮೇಲೆ ಕೂತು ಹುಲಿ ಸವಾರಿ ಮಾಡಿದೆ. ನಡುರಸ್ತೆಯಲ್ಲಿಯೇ ಜಡೆಜಗಳ ಜೋರಾಗಿ ನಡೆದಿದೆ. ಹಾಗಿದ್ರೆ ತಡ ಮಾಡೋದು ಯಾಕಲ್ವ..? ಆ ವೈರಲ್ ವೀಡಿಯೋಗಳನ್ನ ನೋಡ್ಕೊಂಡು ಬರೋಣ ಬನ್ನಿ.