2024ರಲ್ಲಿ ದೇಶದ ಗದ್ದುಗೆ ಏರೋದು ಯಾರು? ಲೋಕಸಭೆಯ ಭವಿಷ್ಯ ಬಿಚ್ಚಿಟ್ಟ 2 ಮಹಾ ಸಮೀಕ್ಷೆ!

2024ರಲ್ಲಿ ದೇಶದ ಗದ್ದುಗೆ ಏರೋದು ಯಾರು? ಲೋಕಸಭೆಯ ಭವಿಷ್ಯ ಬಿಚ್ಚಿಟ್ಟ 2 ಮಹಾ ಸಮೀಕ್ಷೆ!

Published : Oct 09, 2023, 09:32 AM IST

2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದು ಮತ್ತೆ ಪ್ರಧಾನಿಯಾಗ್ತಾರಾ..? ನೆಹರು ನಂತರ ಈವರೆಗೆ ಯಾವ ಪ್ರಧಾನಿಯೂ 3ನೇ ಬಾರಿಗೆ ಆಯ್ಕೆಯಾದ ಉದಾಹರಣೆಯಿಲ್ಲ. 3 ಬಾರಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಗೆದ್ದಿದ್ದು ಸತತ 2 ಚುನಾವಣೆಗಳನ್ನಷ್ಟೇ. ಮೂರನೇ ಚುನಾವಣೆಯನ್ನ ಸೋತಿದ್ದರು ಇಂದಿರಾ. ಈಗ ಮೋದಿ ಮತ್ತೆ ನಾನೇ ಪ್ರಧಾನಿ ಅಂತಿದ್ದಾರೆ.. ಇತ್ತೀಚೆಗೆ 2 ಸಂಸ್ಥೆಗಳು ಲೋಕಸಭಾ ಚುನಾವಣೆಯ ಸಮೀಕ್ಷೆಗಳನ್ನ ಮಾಡಿವೆ.

2024ರ ಲೋಕಸಭಾ ಚುನಾವಣೆಗೆ ಉಳಿದಿರೋದು ಕೇವಲ 5 ತಿಂಗಳಷ್ಟೇ ಈಗಾಗಲೇ ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಹಿಡಿಯೋಕೆ  ತಮ್ಮದೇ ಆದ ರಣತಂತ್ರ ಹೆಣೆಯುತ್ತಿವೆ. ಈ ಮಧ್ಯೆ ಲೋಕಸಭೆ ಚುನಾವಣೆ(Loksabha) ಬಗ್ಗೆ  2 ಸಮೀಕ್ಷೆಗಳು ಹೊರಬಿದ್ದಿದ್ದು. ಇವರೇ ಮುಂದೆ ಅಧಿಕಾರ ಹಿಡಿಯೋದು ಎಂದು ಹೇಳ್ತಿವೆ. ಇಂಡಿಯಾ ಟಿವಿ ಹಾಗೂ ಟೈಮ್ಸ್ ನೌ ಸಮೀಕ್ಷೆಗಳ(Survey) ಪ್ರಕಾರ ಆಡಳಿತರೂಢ ಎನ್ಡಿಎ ಮತ್ತೆ ಅಧಿಕಾರ ಹಿಡಿಯೋದು ಫಿಕ್ಸ್ ಎಂದು ಭವಿಷ್ಯ ನುಡಿದಿವೆ. ಇಂಡಿಯಾ ಮೈತ್ರಿಕೂಟ ಸ್ವಲ್ಪ ಉತ್ತಮ ಸಾಧನೆ ಮಾಡಿದ್ರೂ ಅಧಿಕಾರ ಹಿಡಿಯೋದು ಕನಸಾಗಿಯೇ ಉಳಿಯಲಿದೆ ಎಂದಿದೆ ಸಮೀಕ್ಷೆ. ಇಂಡಿಯಾ ಟಿವಿ ಸಮೀಕ್ಷೆ ಪ್ರಕಾರ 2024ರ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ(NDA) 543 ಸ್ಥಾನಗಳ ಪೈಕಿ 318 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಇನ್ನೂ ಇಂಡಿಯಾ ಮೈತ್ರಿಕೂಟ 175 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ. ಟೈಮ್ಸ್ ನೌ ಸಮೀಕ್ಷೆ(Times Now survey) ಪ್ರಕಾರ ಎನ್ಡಿಎ ಮೈತ್ರಿಕೂಟ 2024ರ ಚುನಾವಣೆಯಲ್ಲಿ ಶೇಕಡ 42.6ರಷ್ಟು ಮತಗಳೊಂದಿಗೆ 297 ರಿಂದ 317 ಸ್ಥಾನ,  ಇಂಡಿಯಾ ಮೈತ್ರಿಕೂಟ ಶೇಕಡ 40.2ರಷ್ಟು ಮತಗಳೊಂದಿಗೆ 165 ರಿಂದ 185 ರ ಸ್ಥಾನ, ಯಾವುದೇ ಬಣ ಸೇರದೇ ತಟಸ್ಥವಾಗಿರೋ ವೈಎಸ್ಆರ್ಸಿಪಿ 24 ರಿಂದ 25 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಇನ್ನೂ ಬಿಜೆಡಿ 13 ರಿಂದ 15 ಸ್ಥಾನ ಗೆಲ್ಲಬಹುದು, ಬಿಆರ್ಎಸ್ 9 ರಿಂದ 11 ಸ್ಥಾನ ಗೆಲ್ಲುವ ಸಾಧ್ಯತೆ ಇದೆ.. ಪಕ್ಷೇತರರು 11 ರಿಂದ 14 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ಇಂಡಿಯಾ ಟಿವಿ, ಟೈಮ್ಸ್ ನೌ ಸಮೀಕ್ಷೆಗಳು ಪಕ್ಷಗಳ ಸ್ಥಾನಗಳ ಬಗ್ಗೆಯೂ ಭವಿಷ್ಯ ನುಡಿದಿದ್ದು, ಮತ್ತೆ ಆಡಳಿತರೂಢ ಬಿಜೆಪಿ ಪಕ್ಷ ಸ್ವಂತ ಬಲದ ಮೇಲೆಯೇ ಅಧಿಕಾರದ ಗದ್ದುಗೆ ಏರಲಿದೆ ಎಂದು ಹೇಳಿದೆ.

ಇದನ್ನೂ ವೀಕ್ಷಿಸಿ:  Today Horoscope: ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ? ವೃಶ್ಚಿಕ ರಾಶಿಯವರಿಗೆ ವೃತ್ತಿಯಲ್ಲಿ ಇಂದು ಅನುಕೂಲ

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more