ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?

ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?

Published : Apr 11, 2025, 02:16 PM ISTUpdated : Apr 11, 2025, 02:20 PM IST

ಉಗ್ರ ಸಂಹಾರ ಯಜ್ಞ ಶುರುಮಾಡಿದ್ದಾರೆ ನರೇಂದ್ರ ಮೋದಿ.. ಭಾರತವನ್ನ ಬಲಿಷ್ಠಗೊಳಿಸ್ತಾ.. ಮೋದಿ ಇಡ್ತಾ ಇರೋ ಮಹಾ ಹೆಜ್ಜೆಗಳು ಹೇಗಿವೆ.? ನಮೋ ಆಡಳಿತದಲ್ಲಿ ರಕ್ತಪಿಪಾಸು ಉಗ್ರರ ಉಸಿರುಗಟ್ಟಿರೋದು ಹೇಗೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಮೋದಿ ರಕ್ಷಾವ್ಯೂಹ..

ಉಗ್ರ ಸಂಹಾರ ಯಜ್ಞ ಶುರುಮಾಡಿದ್ದಾರೆ ನರೇಂದ್ರ ಮೋದಿ.. ಭದ್ರಕೋಟೆಯಾಗಿ ಬದಲಾಗ್ತಿದೆ ಭಾರತ.. ತಿಹಾರ್ ಜೈಲು ಕಂಬಿ ಹಿಂದೆ ಬಂದಾಗಿದೆ ರಕ್ಕಸ ಉಗ್ರ ತಹಾವೂರ್ ರಾಣಾ.. ಹಾಗಿದ್ರೆ ನೆಕ್ಸ್ಟ್ ಯಾರು..? ಮೋದಿ ಮುಂದಿನ ಟಾರ್ಗೆಟ್ ಏನು..? ವೈರಿಗಳನ್ನ ವಿನಾಶ ಮಾಡ್ತಾ.. ಭಾರತವನ್ನ ಬಲಿಷ್ಠಗೊಳಿಸ್ತಾ.. ಮೋದಿ ಇಡ್ತಾ ಇರೋ ಮಹಾ ಹೆಜ್ಜೆಗಳು ಹೇಗಿವೆ.? ನಮೋ ಆಡಳಿತದಲ್ಲಿ ರಕ್ತಪಿಪಾಸು ಉಗ್ರರ ಉಸಿರುಗಟ್ಟಿರೋದು ಹೇಗೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಮೋದಿ ರಕ್ಷಾವ್ಯೂಹ..

 ಭಯೋತ್ಪಾದಕರ ಮಟ್ಟ ಹಾಕೋಕೆ ಮೋದಿ ಪಣತೊಟ್ಟಿರುವಾಗಲೇ ಅತ್ತ ಪಾಕಿಸ್ತಾನದಲ್ಲಿ ಮುಸುಕುಧಾರಿಗಳ ಆರ್ಭಟ ಜೋರಾಗಿದೆ. ಭಾರತಕ್ಕೆ ಬೇಕಾಗಿದ್ದ ಉಗ್ರರ ಕಥೆಯನ್ನ ಆ ಮುಸುಕುಧಾರಿಗಳು ಮುಗಿಸ್ತಾ ಇದ್ದಾರೆ.
 ಇತ್ತ ಉಗ್ರ ಸಂಹಾರಕ್ಕೆ ಮೋದಿ ಮಹಾಯಜ್ಞ ಶುರು ಮಾಡಿದ್ದಾರೆ.. ಅತ್ತ ಪಾಕಿಸ್ತಾನದಲ್ಲಿ  ಭಯೋತ್ಪಾಕದರನ್ನ ಹುಡುಕಿ, ಹುಡುಕಿ ಕೊಲ್ತಿದ್ದಾರೆ ಮುಸುಕುಧಾರಿಗಳು.. ಹೀಗಲ್ಲಿ ಉಗ್ರರ ಬೇಟೆಯಾಡ್ತಾ ಇರೋದು ಯಾರು ಅಂತ ಗೊತ್ತಿಲ್ಲ. ಆದ್ರೆ, ಅಲ್ಲಿ ಬಲಿಯಾಗಿರೋರ ಪೈಕಿ ಬಹುತೇಕರು ಭಾರತಕ್ಕೆ ಬೇಕಾಗಿದ್ದ ಉಗ್ರರು.

ದೇಶದ ಒಳಗೇ ಇದ್ಕೊಂಡು ಸರ್ಕಾರಕ್ಕೆ ಸವಾಲು ಹಾಕ್ತಿದ್ದ ಮತ್ತೊಂದು ಶಕ್ತಿಯನ್ನ ನಾಶಗೊಳಿಸಲು ಮೋದಿ ಸರ್ಕಾರ ಮುಂದಾಗಿದೆ. ಹಾಗಿದ್ರೆ, ಆ ಶಕ್ತಿ ಯಾವುದು..? ಅದನ್ನ ಇಲ್ಲವಾಗಿಸ್ತಾ ಇರೋದು ಹೇಗೆ..?
ದೇಶದ ಒಳಗೆ ಒಂದು ದೊಡ್ಡ ಕಾರ್ಯಾಚರಣೆ ನಡೆಯುತ್ತಿದೆ.. ಶರಣಾಗಿ ಇಲ್ಲವೇ ಹತರಾಗಿ ಎನ್ನುವ ಸಂದೇಶ ರವಾನೆಯಾಗಿದೆ. ಹಾಗಿದ್ರೇ ಈ ಸಂದೇಶ ಯಾರಿಗೆ ರವಾನೆಯಾಗಿರೋದು.? ಈಗ ನಡೀತಾಯಿರೋ ಕಾರ್ಯಾಚರಣೆಯಾದ್ರೂ ಏನು..?

ಇದುವರೆಗೆ ಭಾರತದ ತನಿಖಾ ಸಂಸ್ಥೆ ಕರೆತಂದಿರುವ ಉಗ್ರರು

ಗ್ಯಾಂಗ್​​ಸ್ಟರ್​ ಹಾಗೂ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರೋ  ಆರೋಪ ಹೊತ್ತಿರುವ ಛೋಟಾ ರಾಜನ್ ನ ಇಂಡೋನೇಶಿಯಾದ ಬಾಲಿಯಿಂದ 2015ರಲ್ಲಿ ಭಾರತಕ್ಕೆ ಕರೆದುಕೊಂಡು ಬರಲಾಗಿದೆ. ಹಾಗೇನೆ, ಬಬ್ಬರ್ ಖಾಲ್ಸಾ ಇಂಟರ್​ ನ್ಯಾಷನಲ್​ ಸಂಘಟನೆಯ ಸದಸ್ಯ, 1995ರಲ್ಲಿ ಪಂಜಾಬ್​ ಸಿಎಂ ಬಿಯಾಂತ್​ ಸಿಂಗ್​ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದ ಜಗ್ತಾರ್​ ಸಿಂಗ್ ತಾರಾ  ಥೈಲ್ಯಾಂಡ್​ನಿಂದ ಭಾರತಕ್ಕೆ 2015ರಲ್ಲಿ ಹಸ್ತಾಂತರಗೊಂಡಿದ್ದ. ಇನ್ನು ಭಯೋತ್ಪಾದನೆ ಜೊತೆಗೆ ನಂಟು ಹೊಂದಿರೋ ಭೂಗತ ಪಾತಕಿ ರವಿಪೂಜಾರಿಯನ್ನ ಆಫ್ರಿಕಾದ ಸೆನೆಗಲ್​ನಿಂದ 2020ರಲ್ಲಿ ಕರೆದಕೊಂಡು ಬರಲಾಗಿದೆ. ಹಾಗೇನೆ, ಲಷ್ಕರ್​-ಎ-ತೊಯ್ಬಾ ಸದಸ್ಯನಾಗಿ ಬೆಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪ ಹೊತ್ತಿರೋ ಸಲ್ಮಾನ್ ರೆಹಮಾನ್ ಖಾನ್​ನ 2024ರಲ್ಲಿ ಆಫ್ರಿಕಾದ ರುವಾಂಡದಿಂದ ಕರೆದುಕೊಂಡು ಬರಲಾಗಿದೆ.

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more