ಉತ್ಸವಕ್ಕೆ ತಂದಿದ್ದ ಆನೆಗೆ ಮದ..! ಮುಂದೆ ನಡೆದಿದ್ದು ಹೊಡಿ ಬಡಿ..! ಅಯ್ಯಪ್ಪ ಭಕ್ತರ ಕಾರ್ ಪೀಸ್ ಪೀಸ್..!

Dec 18, 2023, 10:06 AM IST

ಮೊನ್ನೆ ಮೊನ್ನೆಯಷ್ಟೆ ಚಾಮುಂಡಿ ತಾಯಿ ಅಂಬಾರಿಯನ್ನ ಹೊತ್ತಿದ್ದ ಕರ್ನಾಟಕದ(Karnataka) ಹೆಮ್ಮೆಯ ಅರ್ಜುನ ಆನೆ ಕೊನೆಯುಸಿರೆಳಿದಿತ್ತು. ಅರ್ಜುನ ಸಾವಿನ ಸುದ್ದಿ ಕರುನಾಡಿಗೆ ಆಘಾತ ಉಂಟು ಮಾಡಿತ್ತು. ಇದರ ನಡುವೆಯೇ ಪಕ್ಕದ ರಾಜ್ಯ ಕೇರಳದಲ್ಲಿ(Kerala) ಆನೆಗಳ ಉತ್ಸವ ನಡೆಯುತ್ತದೆ. ಆನೆಗಳ (Elephant)ನಾಡು ಕೇರಳದ ತ್ರಿಶೂರ್ಪುರಂನಲ್ಲಿ ಆನೆಗಳ ಹಬ್ಬ ನಡೆಯುತ್ತೆ. ಈ ಹಬ್ಬದಲ್ಲಿ ಆನೆಗಳನ್ನ ಸಿಂಗರಿಸಲಾಗುತ್ತೆ. ಆನೆಗಳ ಮೆರವಣಿಗೆ ಮಾಡಲಾಗತ್ತೆ. ಆದ್ರೆ ಇದೇ ಉತ್ಸವ ನಡೆಯೋ ಊರಲ್ಲಿ ನಡೆಯಬಾರದ ದುರ್ಘಟನೆ ನಡೆದು ಹೋಗಿದೆ. ದೇವಸ್ಥಾನದ(Temple) ಉತ್ಸವಕ್ಕೆ ಕರೆ ತಂದಿದ್ದ ಆನೆಯೊಂದಕ್ಕೆ ಮದವೇರಿದೆ. ಆನೆ ಜನರನ್ನು ಎಲ್ಲೆಂದರಲ್ಲಿ ಅಟ್ಟಿಸಿಕೊಂಡು ಹೋಗಿದೆ. ಬಳಿಕ 2 ಕಾರು, ಒಂದು ಟೆಂಪೋ ಟ್ರಾವೆಲ್ಲರ್ ಅನ್ನು ಜಖಂಗೊಳಿಸಿದೆ.ತೃಪ್ರಯಾರ್ನಲ್ಲಿರುವ ಶ್ರೀರಾಮ ಕ್ಷೇತ್ರದ ಉತ್ಸವಕ್ಕೆ ಪ್ರತಿ ವರ್ಷ ಆನೆಯನ್ನು ಕರೆ ತರಲಾಗುತ್ತಿದೆ. ಈ ರೀತಿಯಾಗಿ ಕರೆ ತಂದಾಗ ಜನರು ಆನೆಯ  ಫೋಟೋ, ವಿಡಿಯೋ ತೆಗೆದಿದ್ದಾರೆ. ಈ ಸಂದರ್ಭದಲ್ಲಿ ಆನೆ ಏಕಾಏಕಿ ಆನೆ ರೊಚ್ಚಿಗೆದ್ದಿದ್ದು, ಉತ್ಸವ ಅಕ್ಷರಶಃ ರಣಾಂಗಣವಾಗಿತ್ತು. ಮದವೇರಿದ ಆನೆಯ ಅಟ್ಟಹಾಸಕ್ಕೆ 2 ಕಾರು, ಒಂದು ಟಿಟಿ ಸಂಪೂರ್ಣ ಜಖಂ ಆಗಿದೆ. ಆನೆಯನ್ನ ನೋಡೋಕೆ ಅಂತ ಭಕ್ತರು ರಸ್ತೆ ಪಕ್ಕದಲ್ಲಿ ನಿಂತಿದ್ರು, ಆನೆ ಲಾರಿಯಿಂದ ಇಳಿದು, ನೀರು ಕುಡಿಯೋ ಟೈಮಲ್ಲಿ ಅದೇನ್ ಆಯ್ತೋ ಗೊತ್ತಿಲ್ಲ. ಸಡನ್ನಾಗಿ ಆನೆ ರೊಚ್ಚಿಗೆದ್ದಿದೆ. ಒಂದೇ ಕ್ಷಣದಲ್ಲಿ ಉತ್ಸವ ರಣಾಂಗಣವಾಗಿತ್ತು.

ಇದನ್ನೂ ವೀಕ್ಷಿಸಿ:  ಅಚ್ಚರಿಯ ಭವಿಷ್ಯ ನುಡಿದ ಬಾಬಾ ವಂಗಾ..! ಯುರೋಪ್‌ನ ದೊಡ್ಡ ದೇಶಗಳಲ್ಲಿ ಭಯೋತ್ಪಾದಕ ದಾಳಿ !