Swati Maliwal Assault Case: ದೆಹಲಿ ಸಿಎಂ ಕೇಜ್ರಿವಾಲ್ ಆಪ್ತನಿಂದ ಹಲ್ಲೆ ಪ್ರಕರಣ: ಈ ಬಗ್ಗೆ ಸ್ವಾತಿ ಮಲಿವಾಲ ಹೇಳಿದ್ದೇನು..?

May 24, 2024, 11:09 AM IST

ದೆಹಲಿ ಸಿಎಂ ಕೇಜ್ರಿವಾಲ್ ಆಪ್ತನಿಂದ ಹಲ್ಲೆ ಪ್ರಕರಣದ(Swati Maliwal Assault Case) ಬಗ್ಗೆ ಘಟನೆಯನ್ನು ಎಳೆಎಳೆಯಾಗಿ ಸ್ವಾತಿ ಮಲಿವಾಲ(Swati Maliwal) ಬಿಚ್ಚಿಟ್ಟಿದ್ದಾರೆ. ತನ್ನ ಮೇಲಿನ ಹಲ್ಲೆಯನ್ನು ವಿವರವಾಗಿ ರಾಜ್ಯಸಭಾ ಸದಸ್ಯೆ ತಿಳಿಸಿದ್ದಾರೆ. ಮೇ. 13ರಂದು ದೆಹಲಿ ಸಿಎಂ ನಿವಾಸದಲ್ಲಿ ಹಲ್ಲೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಕೇಜ್ರಿವಾಲ್( Arvind Kejriwal) ಆಪ್ತ ಸಹಾಯಕ ಬಿಭವ್ ಕುಮಾರ್‌ನಿಂದ(Bibhav Kumar) ಹಲ್ಲೆ ನಡೆಸಲಾಗಿದ್ದು, ಈ ವೇಳೆ ಕೇಜ್ರಿವಾಲ್ ಮನೆಯಲ್ಲೇ ಇದ್ದರು ಎಂದು ಸ್ವಾತಿ ಮಲಿವಾಲ ಆರೋಪಿಸಿದ್ದಾರೆ. ಹಲ್ಲೆ ನಡೆದಾಗ ತಾನು ಮನೆಯಲ್ಲಿ ಇರಲಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದು, ಸಿಎಂ ಹೇಳಿಕೆಯನ್ನು ಸ್ವಾತಿ ಮಲಿವಾಲ ಅಲ್ಲಗಳೆದಿದ್ದಾರೆ. ಅಲ್ಲದೇ ಈ ಬಗ್ಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಪಶ್ಚಿಮ ಬಂಗಾಳ ಒಬಿಸಿ ಮೀಸಲು ರದ್ದು! ಹೈಕೋರ್ಟ್ ತೀರ್ಪು ಒಪ್ಪಲ್ಲ..ಇದು ಬಿಜೆಪಿ ಪಿತೂರಿ ಎಂದ ದೀದಿ