ಸಮೀಕ್ಷೆಯಲ್ಲಿ ಮಧ್ಯಪ್ರದೇಶದ ಭವಿಷ್ಯ ಏನಾಗಿದೆ..? ಗೆಲುವು, ಸೋಲು ಯಾರಿಗೆ..?

Oct 17, 2023, 12:05 PM IST

ಮಧ್ಯಪ್ರದೇಶದ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನ.17ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣೆ ಗೆದ್ದು ಮಧ್ಯಪ್ರದೇಶದ(Madhya Pradesh) ಮಹಾರಾಜ ಯಾರಾಗ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಇಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತಾ ? ಅಥವಾ ಕಾಂಗ್ರೆಸ್‌(Congress) ಇದಕ್ಕೆ ಬ್ರೇಕ್‌ ಹಾಕುತ್ತಾ ಎಂಬುದು ಇನ್ನೂ ತಿಳಿದಿಲ್ಲ. ಇಲ್ಲಿ ಜೂನ್‌ನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ 114 ಸ್ಥಾನ ಪಡೆದ್ರೆ, ಬಿಜೆಪಿ(BJP) 112 ಸ್ಥಾನ ಪಡೆದಿದೆ. ಆದ್ರೆ ಅಕ್ಟೋಬರ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ 119 ಸ್ಥಾನ ಪಡೆದಿದ್ದು, ಬಿಜೆಪಿ 110 ಸ್ಥಾನ ಪಡೆದಿದೆ. ಇದರ ಪ್ರಕಾರ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.

ಇದನ್ನೂ ವೀಕ್ಷಿಸಿ:  ಗಾಜಾ ಅತಿಕ್ರಮಿಸಿದ್ರೆ ಇಸ್ರೇಲ್‌ ವಿರುದ್ಧ ಇರಾನ್‌ ಯುದ್ಧ ? ಇಸ್ರೇಲ್‌ ಬಳಿ ಇರುವ ಆಯ್ಕೆಗಳೇನು ?