Mar 17, 2024, 5:06 PM IST
ಚುನಾವಣಾ ಆಯೋಗ ಮಹಾಮತಸಂಗ್ರಾಮದ ಕಂಪ್ಲೀಟ್ ಡೀಟೇಲ್ಸ್ ಮುಂದಿಟ್ರು. ಏಪ್ರಿಲ್ 19ರಿಂದ ಈ ಮತಸಮರ ಶುರುವಾಗುತ್ತೆ. ಜೂನ್ 4ರಂದು ಎಲೆಕ್ಷನ್ ಯಾರ ಗೆದ್ರು, ಎಷ್ಟು ಗೆದ್ರು ಅನ್ನೋದು ಬಯಲಾಗುತ್ತೆ. ಈಗಾಗ್ಲೇ, ನೀತಿಸಂಹಿತೆ ಸಹ ಜಾರಿಯಾಗಿದೆ. ಇಂಥಾ ಸಂದರ್ಭದಲ್ಲಿ ದೊಡ್ಡ ಸದ್ದು ಮಾಡ್ತಾ ಇರೋ ಒಂದು ಸಂಗತಿ ಅಂದ್ರೆ, ಅದು ಚುನಾವಣಾ ಬಾಂಡ್(Electoral bonds). ಎಲೆಕ್ಟೋರಲ್ ಬಾಂಡ್. ಈ ಹೆಸರನ್ನ ಈ ಮುಂಚೆ ನಾವೂ ಕೇಳಿದ್ವಿ. ನೀವೂ ಕೇಳೇ ಇರ್ತೀರಿ. ಆದ್ರೆ ಈಗ ಈ ಎಲೆಕ್ಷನ್ ಬಾಂಡ್, ದೊಡ್ಡದೊಂದು ರಹಸ್ಯವನ್ನೇ ಬಟಾಬಯಲಾಗಿಸೋಕೆ ಮುಂದಾಗಿದೆ. ಇದರಿಂದ, ನಿನ್ನೆ ಮೊನ್ನ ತನಕ ಇದ್ದ ಲೆಕ್ಕಾಚಾರವೇ ಬುಡಮೇಲಾಗಲಿದೆ ಅಂತಿದ್ದಾರೆ. ಭಾರತದಲ್ಲಿ(India) ಈ ಹಿಂದೆ ಇದ್ದ ಕಾನೂನಿನ ಪ್ರಕಾರ, ದೇಣಿಗೆ ಕೊಟ್ಟೋರು ಎಷ್ಟು ಕೊಟ್ರು, ಯಾರಿಗೆ ಕೊಟ್ರು ಅನ್ನೋ ವಿವರನ ಬಹಿರಂಗ ಪಡಿಸೋ ಜರೂರತ್ತು ಇರ್ಲಿಲ್ಲ. ಆದ್ರೆ ಇದು, ಮಾಹಿತಿ ಹಕ್ಕಿನ ಕಾಯ್ದೆಯ(Right to Information Act) ಉಲ್ಲಂಘನೆಯಾಗುತ್ತೆ ಅನ್ನೋ ಕಾರಣಕ್ಕೆ, ಈ ವಿಚಾರ ಸುಪ್ರೀಂ(Supreme court) ಮೆಟ್ಟಿಲೇರಿತ್ತು. ಅಲ್ಲಿಂದ ಕತೆ ಬದಲಾಗೋಕೆ ಶುರುವಾಯ್ತು.
ಇದನ್ನೂ ವೀಕ್ಷಿಸಿ: Ashok on Eshwarappa: ನಾಲ್ಕು ಗೋಡೆಗಳ ಮಧ್ಯೆ ನಡೆದ ಮಾತನ್ನ ನಾನು ಹೇಳಲಾಗಲ್ಲ: ಆರ್. ಅಶೋಕ್