Sep 3, 2023, 2:27 PM IST
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈಗಾಗಲೇ ಹಲವಾರು ಅಚ್ಚರಿಯ ನಿರ್ಣಯಗಳನ್ನ ಕೈಗೆತ್ತಿಕೊಂಡಿದೆ. ಅದ್ಭುತ ಅನ್ನೋ ಹಾಗೆ ರೀತಿ ನೀತಿಗಳನ್ನೇ ಬದಲಾಯಿಸಿದೆ. ಈಗ ಅದೇ ಮೋದಿ(PM Modi) ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಕೈಹಾಕಿರೋ ಹಾಗೆ ಕಾಣ್ತಾ ಇದೆ. ಆ ನಿರ್ಧಾರ ಜಾರಿಯಾದ್ರೆ, ದೇಶದಲ್ಲಿ ಈ ತನಕ ಇರೋ ರಾಜಕೀಯ ಲೆಕ್ಕಾಚಾರ ಕಂಪ್ಲೀಟ್ ಚೇಂಜ್ ಆಗೋದಂತೂ ಸುಳ್ಳಲ್ಲ. ಅಷ್ಟೇ ಅಲ್ಲ, ಇಷ್ಟೂ ಕಾಲ ಚುನಾವಣೆ ಅನ್ನೋ ಸಾಂವಿಧಾನಿಕ ಹಬ್ಬ ನಡೀತಿದ್ದ ವಿಧಾನವೇ ಬದಲಾಗಲಿದೆ. ಒನ್ ನೇಷನ್ ಒನ್ ಎಲೆಕ್ಷನ್(One Nation One Election), ಅರ್ಥಾತ್ ಒಂದು ದೇಶ ಒಂದು ಚುನಾವಣೆ(Election), ಇದೇನು ಸಾಮಾನ್ಯ ಸಂಗತಿ ಅಲ್ಲ. ಇದು ದೇಶದ ರಾಜಕೀಯ ತಂತ್ರಗಾರಿಕೆನಾ ಮತ್ತೊಂದು ಮಗ್ಗುಲಿಗೆ ಬದಲಿಸಬಲ್ಲದು. ಅಂಥದ್ದೊಂದು ಮಹಾನಿರ್ಣಯಕ್ಕೆ, ಈಗ ಮೋದಿ ಸರ್ಕಾರ ಕೈಹಾಕಿದೆ ಅನ್ನೋ ಮಾತು ಕೇಳಿಬರ್ತಿದೆ. ಈಗ ಇವೇ ಮಾತುಗಳನ್ನ ನಿಜವಾಗಿಸೋಕೆ, ಇದೇ ವರ್ಷಾಂತ್ಯದ ವೇಳೆಗೆ ನಡೆಯಲಿರುವ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆ ಜತೆಯಲ್ಲೇ ಲೋಕಸಭೆ ಚುನಾವಣೆ(Loksabha) ಕೂಡ ನಡೆಯಲಿದ್ಯಾ ಅನ್ನೋ ಅನುಮಾನಗಳೂ ಮೂಡುತ್ತಿವೆ. ಈ ವದಂತಿಗಳ ನಡುವೆ ಕೇಂದ್ರ ಸರ್ಕಾರ 5 ದಿನಗಳ ವಿಶೇಷ ಅಧಿವೇಶನ ನಡೆಸಲು ಮುಂದಾಗಿರೋದು, ಕುತೂಹಲ ಕೌತುಕ ಹೆಚ್ಚಿಸ್ತಾ ಇದೆ.
ಇದನ್ನೂ ವೀಕ್ಷಿಸಿ: ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ, ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಿದ್ದಾರೆ: ರಾಜೂಗೌಡ