ಸಂಸಂತ್ ಒಳಗೆ 3 ಸಂಚು ರೂಪಿಸಿದ್ದಾಗಿ ಬಾಯ್ಬಿಟ್ರಾ ಆರೋಪಿಗಳು..? ಬಗೆದಷ್ಟು ಬಯಲಾಗ್ತಿದೆ ಭಯಾನಕ ಸತ್ಯ !

Dec 18, 2023, 11:39 AM IST

ಸಂಸತ್‌ ಮೇಲಿನ ಸ್ಮೋಕ್‌ ಬಾಂಬ್‌ ದಾಳಿ(smoke bomb attack) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ(Narendra Modi) ಮೌನ ಮುರಿದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಸಂಸತ್(Parliament) ದಾಳಿ ಅತ್ಯಂತ ಗಂಭೀರವಾದ ಪ್ರಕರಣವಾಗಿದ್ದು, ಅಷ್ಟೇ ಆತಂಕಕಾರಿ ಘಟನೆಯಾಗಿದೆ. ರಾಷ್ಟ್ರೀಯ ಭದ್ರತಾ ಲೋಪ ಆಗಿರುವುದರಿಂದ ಆಳವಾದ ತನಿಖೆ ನಡೆಯಬೇಕು. ತನಿಖೆಯಲ್ಲಿ ಯಾವುದೇ ನಿರ್ಲಕ್ಷ್ಯ ಮಾಡೋ ಮಾತೇ ಇಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲಿದೆ. ಯಾರೊಬ್ಬರು ಇದರಲ್ಲಿ ರಾಜಕೀಯವನ್ನು ಬೆರೆಸಬಾರದು ಎಂದು ಹೇಳಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟು ಭಯಾನಕ ಸತ್ಯಗಳು ಬಯಲಾಗುತ್ತಿವೆ. ಮೂರು ಆಘಾತಕಾರಿ ಅಂಶವನ್ನು ಸಂಸತ್‌ ದಾಳಿಕೋರರು ಬಾಯ್ಬಿಟ್ಟಿದ್ದಾರೆ. ಇನ್ನೂ ಈ ದಾಳಿಯನ್ನು ಮರು ಸೃಷ್ಟಿಸಲು ಪೊಲೀಸರು ನಿರ್ಧಾರ ಮಾಡಿದ್ದು, ದೆಹಲಿ ಪೊಲೀಸರು  ಸಂಸತ್ ಸಚಿವಾಲಯದ ಅನುಮತಿ ಕೇಳುವ ಸಾಧ್ಯತೆ ಇದೆ. ಸಂಸತ್‌ ಸ್ಮೋಕ್ ಬಾಂಬ್ ಕೇಸ್‌ನಲ್ಲಿ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಹೊಸ ವರ್ಷಕ್ಕೆ ಲೋಕಾರ್ಪಣೆಯಾಗಲಿದೆ ರಾಮಮಂದಿರ: ಹೇಗಿದ್ದ ಅಯೋಧ್ಯೆ, ಹೇಗಾಗಿದೆ ಗೊತ್ತಾ ?