Apr 30, 2022, 4:16 PM IST
ಒಡಿಶಾದ ಜಹಾಲ್ ಗ್ರಾಮದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಇವರು ಸೀರೆಯುಟ್ಟು ಮಹಾರಾಣಿಯಂತೆ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಡಿಶಾದ ಜಾಜ್‌ಪುರ ಜಿಲ್ಲೆಯ ಜಹಾಲ್ ಗ್ರಾಮದ ಈ ಮಹಿಳೆಯ ಹೆಸರು ಮೊನಾಲಿಸಾ ಭದ್ರಾ. ಇವರು ಕುದುರೆ ಕೇವಲ ಕುದುರೆ ಮಾತ್ರವಲ್ಲದೇ ಮತ್ತು ಬುಲೆಟ್ ಹಾಗೂ ಟ್ರಕ್‌ನ್ನು ಓಡಿಸುತ್ತಾರೆ. ಸಾಮಾನ್ಯ ಗೃಹಿಣಿಯಾದ ಮೊನಾಲಿಸಾ ಸದ್ಯ ಸಾಕಷ್ಟು ಫಾಲೋವರ್‌ಗಳನ್ನು ಹೊಂದಿರುವ ಯುಟ್ಯೂಬ್ ಸ್ಟಾರ್ ಆಗಿದ್ದಾರೆ.