Jan 28, 2024, 10:45 AM IST
ಬಿಹಾರ ರಾಜಕೀಯದಲ್ಲಿ ಕ್ಷಣಕ್ಷಣಕ್ಕೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೇಳಿಬರುತ್ತಿದೆ. ಬಿಹಾರ(Bihar), ಪಾಟ್ನಾದಲ್ಲಿ ಸರಣಿ ಸಭೆ ನಡೆದಿದ್ದು, ಸರ್ಕಾರ ಬದಲಾಗುವ ಸಾಧ್ಯತೆ ಇದೆ. ಒಂದೆಡೆ ಆರ್‌ಜೆಡಿ (RJD) ಇನ್ನೊಂದೆಡೆ ಬಿಜೆಪಿ (BJP) ಹೈವೋಲ್ಟೇಜ್ ಸಭೆ ನಡೆಸಿವೆ. ಇಂದು ಬೆಳಗ್ಗೆ ಜೆಡಿಯು ಶಾಸಕರು, ಸಂಸದರ ಜತೆ ನಿತೀಶ್ ಕುಮಾರ್ (Nitish Kumar)ಸಭೆ ನಡೆಸಲಿದ್ದಾರೆ. ಇಂದು ನಿತೀಶ್ ಕುಮಾರ್ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ. ಅಂತಿಮ ಹಂತದಲ್ಲಿ ಬಿಜೆಪಿ ಮತ್ತು ಜೆಡಿಯು ನಾಯಕರ ಮೈತ್ರಿ ಮಾತುಕತೆ ಇದೆ. ಬಿಹಾರದ ಎನ್‌ಡಿಎ ಮಿತ್ರಪಕ್ಷಗಳ ಜೊತೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ. ಎಲ್ಜೆಪಿ, ಎಚ್ಎಎಂ ಜೊತೆ ಅಮಿತ್ ಶಾ ಸರಣಿ ಮೀಟಿಂಗ್(Meeting) ಮಾಡಿದ್ದಾರೆ. ಗವರ್ನರ್ ಆಯೋಜಿಸಿದ್ದ ಚಹಾಕೂಟಕ್ಕೆ ತೇಜಸ್ವಿ ಗೈರಾಗಿದ್ದಾರೆ. ಗವರ್ನರ್ ರಾಜೇಂದ್ರ ಅರ್ಲೇಕರ್ ಆಯೋಜನೆ ಮಾಡಿದ್ದರು. ನಿತೀಶ್ ಕುಮಾರ್ ಪಕ್ಕದಲ್ಲೇ ತೇಜಸ್ವಿಗೆ ಸೀಟು ಮೀಸಲಿಡಲಾಗಿತ್ತು. ತೇಜಸ್ವಿಗೆ ಮೀಸಲಿದ್ದ ಕುರ್ಚಿಯಲ್ಲಿ ಕುಳಿತ ಬಿಜೆಪಿ ಅಲೋಕ್ ಕುಮಾರ್. ಮೈತ್ರಿಯಾದ್ರೆ ಅಲೋಲ್ ಕುಮಾರ್ ಚೌಧರಿ ಡಿಸಿಎಂ ಸ್ಥಾನ ಸಿಗಬಹುದು ಎನ್ನಲಾಗ್ತಿದೆ. ಸಿಎಂ ಪಕ್ಕ ಅಲೋಕ್ ಕೂರುತ್ತಿದ್ದಂತೆಯೇ ಚರ್ಚೆ ಜೋರಾಗಿದೆ.
ಇದನ್ನೂ ವೀಕ್ಷಿಸಿ: Mandya Politics: ದಳ ಸೇಡಿನ ದಾಳ..ರೆಬೆಲ್ ಲೇಡಿ ಪ್ರತಿ ಪಟ್ಟು..ಮಂಡ್ಯ ಯಾರಿಗೆ..?