Parliament Security Breach: ಮನೋರಂಜನ್‌ ಜೊತೆ ಸಂಬಂಧ ಹೊಂದಿದ್ದ ನಿವೃತ್ತ ಡಿವೈಎಸ್‌ಪಿ ಪುತ್ರನ ಬಂಧನ

Parliament Security Breach: ಮನೋರಂಜನ್‌ ಜೊತೆ ಸಂಬಂಧ ಹೊಂದಿದ್ದ ನಿವೃತ್ತ ಡಿವೈಎಸ್‌ಪಿ ಪುತ್ರನ ಬಂಧನ

Published : Dec 21, 2023, 01:22 PM ISTUpdated : Dec 21, 2023, 01:27 PM IST

ಸಂಸತ್‌ ಸ್ಮೋಕ್‌ ದಾಳಿ ಆರೋಪಿ ಮನೋರಂಜ್‌ ನ ಜೊತೆ ಸಂರ್ಪಕ ಹೊಂದಿದ್ದ ಎಂಬ ಕಾರಣಕ್ಕಾಗಿ ನಿವೃತ್ತ ಡಿವೈಎಸ್‌ಪಿ ಪುತ್ರ ಸಾಯಿಕೃಷ್ಣನ ಬಂಧಿಸಿ ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದ್ಯೊಯಲಾಗಿದೆ.

ಸಂಸತ್ ದಾಳಿ (Parliament Attack) ಪ್ರಕರಣ  ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಪಟ್ಟ 6 ಜನರನ್ನು ಈಗಾಗಲೇ  ಬಂಧಿಸಲಾಗಿದ್ದು, ಅದರಲ್ಲಿ ಮೈಸೂರಿನ ಮನೋರಂಜನ್‌ ಕೂಡ  ಆರೋಪಿ.  ತನಿಖಾ ತಂಡ ಮೈಸೂರಿಗೆ ಬಂದು ಮನೋರಂಜನ್‌ (Manoranjan) ಕುರಿತು ಮಾಹಿತಿ ಕಲೆ ಹಾಕಿರುವ ಬೆನ್ನಲ್ಲೇ  ದೆಹಲಿ ಪೊಲೀಸರು ಮೈಸೂರಿನ ಮನೋರಂಜ್‌ ನ ಜೊತೆ ಸಂರ್ಪಕ ಹೊಂದಿದ್ದ ನಿವೃತ್ತ ಡಿವೈಎಸ್‌ಪಿ ಪುತ್ರ  ಸಾಯಿಕೃಷ್ಣನ ಬಂಧಿಸಿದ್ದಾರೆ. ಬಾಗಲಕೋಟೆಯ 30 ವರ್ಷದ ಸಾಯಿಕೃಷ್ಣ ಎಂಬಾತನ ವಶಕ್ಕೆ ಪಡೆದ ದೆಹಲಿ ಪೊಲೀಸರು,  ಒಂದು ಸುತ್ತಿನ ವಿಚಾರಣೆಯನ್ನು ಬಾಗಲಕೋಟೆಯಲ್ಲಿ ಮಾಡಿದ್ದು, ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದ್ಯೊಯ್ದದ್ದಾರೆ. ಮನೋರಂಜನ್‌ ರೂಮ್‌ಮೇಟ್‌ ಆಗಿದ್ದ ಸಾಯಿಕೃಷ್ಣ, ಕೇವಲ ಮನೋರಂಜನ್‌ ಜೊತೆ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಬಂಧಿಸಲಾಗಿದೆಯೇ ಅಥವಾ ಈ ಪ್ರಕರಣದಲ್ಲಿ ಆತನ ಪಾತ್ರ ಏನಾದರೂ ಇರಬಹುದಾ ಎಂಬ ಅನುಮಾನ ಸೃಷ್ಟಿಸಿದೆ. ಆತನ ವಿಚಾರಣೆಯ ನಂತರ ಹಲವು ಸತ್ಯ ಬಯಲಾಗುವ ಸಾಧ್ಯತೆಗಳಿವೆ.

ಇದನ್ನು ಓದಿ: ಮನೋರಂಜನ್-ಸಾಯಿಕೃಷ್ಣ ಲಿಂಕ್..? ಮೈಸೂರಿನ ಬಳಿಕ ಬಾಗಲಕೋಟೆಗೂ ಹಬ್ಬಿದ ದಾಳಿ ನಂಟು !

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more