
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆಯ ರೌದ್ರಾವತಾರದ ಹಲವು ವೀಡಿಯೋಗಳು ಸೇರಿದಂತೆ ಈ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಲವು ವೀಡಿಯೋಗಳ ಬಗ್ಗೆ ಮಾಹಿತಿ ಇಲ್ಲಿದೆ.
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆಯ ರೌದ್ರಾವತಾರದ ಹಲವು ವೀಡಿಯೋಗಳು ಸೇರಿದಂತೆ ಈ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಲವು ವೀಡಿಯೋಗಳ ಬಗ್ಗೆ ಮಾಹಿತಿ ಇಲ್ಲಿದೆ. ಮಳೆಯಿಂದಾಗಿ ಬೆಟ್ಟದ ಮೇಲಿದ್ದ ಬಂಡೆಯೊಂದು ರಸ್ತೆಗೆ ಉರುಳಿ ಬಿದ್ದಿದ್ದು ವಾಹನಗಳು ಜಖಂ ಆಗಿವೆ. ವಾಹನ ಸವಾರರು ಪವಾಡಸದೃಶವಾಗಿ ಪಾರಾಗಿದ್ದಾರೆ. ಹಾಗೆಯೇ ಮತ್ತೊಂದು ಕಡೆ ನೀರಿನ ಉಗ್ರವತಾರಕ್ಕೆ ಮನೆಯೊಂದು ಕೊಚ್ಚಿ ಹೋಗಿರುವ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಾಗೆಯೇ ವೈರಲ್ ಆದ ಮತ್ತೊಂದು ವೀಡಿಯೋದಲ್ಲಿ ಸೇತುವೆ ಮೇಲೆ ಚಲಿಸುತ್ತಿದ್ದ ಟ್ರಕ್ ನೀರಿಗೆ ಪಲ್ಟಿಯಾದಂತಹ ಘಟನೆ ನಡೆದಿದೆ.