Dec 25, 2024, 10:16 PM IST
ಬೆಂಗಳೂರು (ಡಿ.25): ಪುಷ್ಪ ಅಂದ್ರೆ ಫ್ಲವರ್ ಅಲ್ಲ, ಫೈರ್.. ಇದು ಸಿನಿಮಾದ ಡೈಲಾಗು.. ಆದ್ರೆ, ಅದೇ ಸಿನಿಮಾ ಫೈರ್, ವೈಲ್ಡ್ ಫೈರ್ ಆಗಿ, ಒಂದಿಡೀ ಕುಟುಂಬವನ್ನೇ ಛಿದ್ರಗೊಳಿಸಿದೆ.. ತಾಯಿಯ ಪ್ರಾಣ ಹೋಗಿದೆ.. ಪುಟ್ಟ ಮಗು ಜೀವನ್ಮರಣ ಹೋರಾಟ ನಡೆಸ್ತಾ ಇದೆ.. ಈ ತಪ್ಪಿಗೆ ಕಾರಣ ಯಾರು?
ಯಾರೋ ಮಾಡಿದ ಅಪರಾಧಕ್ಕೆ, ಆ ಅಮಾಯಕರು ಶಿಕ್ಷೆ ಅನುಭವಿಸ್ತಾ ಇದಾರೆ? ಹೀರೋಗಿರಿ ಮಾಡೋರಿಗೆ, ತೆಲಂಗಾಣ ಪೊಲೀಸರು ತೋರಿಸ್ತಾ ಇರೋ ಪಿಕ್ಚರ್ ಸಖತ್ತಾಗಿಯೇ ಇದೆ. ಅವತ್ತು ಸಂಧ್ಯಾ ಥಿಯೇಟರ್ ಬಳಿ ನಡೆದ ದುರಂತಕ್ಕೆ ಯಾರು ಕಾರಣವೋ ಅವರನ್ನ ಪತ್ತೆ ಹಚ್ಚೋಕೆ, ಪತ್ತೆ ಹಚ್ಚಿ ಶಿಕ್ಷೆ ಕೊಡಿಸೋಕೆ ಖಾಕಿ ಶಪಥ ಮಾಡಿದೆ.
ಪುಷ್ಪಾ 2 ಕಾಲ್ತುಳಿತ ಪ್ರಕರಣ ಮೃತ ಮಹಿಳೆ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರ
ಹಾಗಾದರೆ, ಪೊಲೀಸರ ದೃಷ್ಟಿಲಿ ತಪ್ಪಿತಸ್ಥರು ಯಾರು? ಸಿಸಿಟಿವಿ ಹೇಳ್ತಾ ಇರೋ ಸತ್ಯವೇನು ಅನ್ನೋದು ಗೊತ್ತಾಗಬೇಕಿದೆ. ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಈ ಇಬ್ಬರ ಮಧ್ಯೆ ಬಿಗ್ ಫೈಟ್ ಶುರುವಾಗಿದೆ.. ಇಡೀ ಚಿತ್ರರಂಗದ ವಿರುದ್ಧವೇ ತಿರುಗಿಬಿದ್ದ ಹಾಗೆ ಮಾತಾಡ್ತಾ ಇದಾರೆ, ರೇವಂತ್ ರೆಡ್ಡಿ.. ಅವರ ಮಾತಲ್ಲಿರೋ ಆಕ್ರೋಶಕ್ಕೆ ಕಾರಣ ಏನು? ಅಸಲಿಗೆ ಹೇಗೆ ಆರಂಭವಾದ ಯುದ್ಧಕಾಂಡ ಹೇಗೆ ಅಂತ್ಯಕಾಣೋ ಸಾಧ್ಯತೆ ಇದೆ ಅನ್ನೋದೇ ಇರೋ ಕುತೂಹಲ.