ಇಸ್ರೇಲ್‌-ಪ್ಯಾಲೆಸ್ತೇನ್‌ ಯುದ್ಧ: ಈ ಬಗ್ಗೆ ಪ್ರೊ. ಚಂದ್ರಕಾಂತ್‌ ಯಾತನೂರು ಹೇಳೋದೇನು ?

Oct 13, 2023, 12:25 PM IST

ಇಸ್ರೇಲ್‌ ಮತ್ತು ಹಮಾಸ್ ಯುದ್ಧ ಏಳನೇ ದಿನವೂ ಮುಂದುವರೆದಿದೆ. ಇದುವರೆಗೂ ಯುದ್ಧದಲ್ಲಿ 4 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ಬಾಂಬ್‌ ದಾಳಿ ಮಾಡಿದ್ದು, ಹಮಾಸ್‌ ಉಗ್ರರು ಕಂಗೆಟ್ಟಿದ್ದಾರೆ. ನಿನ್ನೆಯ ಉಗ್ರರ ದಾಳಿಯಿಂದ ಇಸ್ರೇಲ್‌ ಸಂಪೂರ್ಣ ಸುರಕ್ಷಿತವಾಗಿದೆ. ರಾಕೆಟ್‌ಗಳನ್ನು ಆಗಸದಲ್ಲೇ ಐರನ್‌ ಡೋಮ್‌ ಹೊಡೆದುರುಳಿಸುತ್ತಿದೆ. 21ನೇ ಶತಮಾನದಲ್ಲಿ ನಾವು ಈ ರೀತಿಯ ಬೆಳವಣಿಗೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಇಡೀ ಜಗತ್ತು ಇದನ್ನು ವಿರೋಧ ಮಾಡುತ್ತಿದೆ. ಭಾರತ ಕೂಡ ಹಮಾಸ್‌ನ ನಿಲುವನ್ನು ವಿರೋಧಿಸಿದೆ. ಈಗಿನ ಪರಿಸ್ಥಿತಿ ತುಂಬಾ ಭಯಾನಕವಾಗಿದೆ. ಈ ಯುದ್ಧದಲ್ಲಿ ಸಾಮಾನ್ಯ ಜನ ಬಲಿಯಾಗುತ್ತಿರುವುದು ನೋವಿನ ವಿಚಾರವಾಗಿದೆ ಎಂದು ಪ್ರೊ. ಚಂದ್ರಕಾಂತ್‌ ಯಾತನೂರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡುವ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಹಮಾಸ್ ಸಂಘಟನೆ ಹುಟ್ಟಿಕೊಂಡಿದ್ದು ಹೇಗೆ? ಈ ಯುದ್ಧಕ್ಕೆ ಕಾರಣವೇನು ?