ಭಾರತ ಮಂಟಪ ಲೋಕಾರ್ಪಣೆಗೊಳಿಸಿದ ಮೋದಿ: ಶೃಂಗೇರಿ ಮಠ ಪುರೋಹಿತರ ನೇತೃತ್ವದಲ್ಲಿ ಪೂಜೆ

Jul 27, 2023, 9:41 AM IST

ನವದೆಹಲಿ: ಪ್ರಗತಿ ಮೈದಾನದಲ್ಲಿ ಅತ್ಯದ್ಭುತ ವಿನ್ಯಾಸಗಳೊಂದಿಗೆ ನಿರ್ಮಾಣಗೊಂಡಿರುವ ಸುಧಾರಿತ ಸಮುಚ್ಚಯ ಐಇಸಿಸಿಯನ್ನು ಪ್ರಧಾನಿ ನರೇಂದ್ರ ಮೋದಿ(PM Modi) ಉದ್ಘಾಟಿಸಿದರು.ಇದಕ್ಕೆ ಭಾರತ ಮಂಟಪ(Bharat Mandapam) ಎಂದು ಹೆಸರನ್ನು ಇಡಲಾಗಿದೆ. ಈ ಸಮುಚ್ಚಯವು ಸುಮಾರು 123 ಎಕರೆ ಭೂಪ್ರದೇಶದಲ್ಲಿದೆ. ಇದು ಸ್ಥಳೀಯ ಹಾಗೂ ಜಾಗತಿಕ ಸಭೆ, ಸಮ್ಮೇಳನ ಹಾಗೂ ಪ್ರದರ್ಶನಗಳ ತಾಣವಾಗಿರಲಿದೆ. ಮಂದಿನ ಜಿ 20 ಸಮ್ಮೇಳನ(G20 conference) ಇಲ್ಲಿಯೇ ನಡೆಯಲಿದೆ. ಪೂಜೆ-ಹೋಮ ಹವನವನ್ನ ಇಲ್ಲಿ ಮಾಡಲಾಗಿದ್ದು, ಕರ್ನಾಟಕದ ಶೃಂಗೇರಿ ಮಠದ(Sringeri Math) ಪುರೋಹಿತರ ನೇತೃತ್ವದಲ್ಲಿ ಪೂಜೆಯನ್ನು ನೆರವೇರಿಸಲಾಯಿತು. ವಿಶ್ವದರ್ಜೆಯ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರವಾಗಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು, ಸಂಸದರು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳನ್ನು ಆಹ್ವಾನಿಸಲಾಗಿತ್ತು.

ಇದನ್ನೂ ವೀಕ್ಷಿಸಿ:  ಏಸ್ ವಾಹನ ಚಾಲಕನ ಎಡವಟ್ಟು: ಬೈಕ್ ಸವಾರನ ದುರ್ಮರಣ