Jan 23, 2024, 11:54 AM IST
500 ವರ್ಷಗಳ ಬಳಿಕ ಅಯೋಧ್ಯೆಯ ಜನ್ಮಭೂಮಿಗೆ ಶ್ರೀರಾಮ ಮರಳಿದ್ದಾನೆ. ಅಯೋಧ್ಯೆಯ(Ayodhya) ರಾಮನಿಗಾಗಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ(Sri Vishwaprasanna Theertha Swamiji) ಹೋರಾಡಿದ್ದಾರೆ. ಶ್ರೀರಾಮ ಪ್ರತಿಷ್ಠಾಪನೆ ಬಳಿಕ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಪೇಜಾವರ ಶ್ರೀ (Pejawar Shri)ಹೇಳಿದ್ದಾರೆ. ಭವ್ಯ ಮಂದಿರದ(Ram mandir) ನಿರ್ಮಾಣದಿಂದ ಭಾರತದ ದಿಕ್ಕು ಬದಲಾಗಲಿದೆ. ರಾಮನ ಪ್ರತಿಷ್ಠಾಪನೆಗಾಗಿ ವಿಶ್ವೇಶ್ವತೀರ್ಥ ಸ್ವಾಮೀಜಿ ಹೋರಾಡಿದರು. 1992ರಲ್ಲಿ ಪ್ರತಿಮಾನ್ಯಾಸ ನೆರವೇರಿಸಿದ್ದ ಪೇಜಾವರದ ವಿಶ್ವೇಶ ತೀರ್ಥರು. ಅಂದು ಉಡುಪಿ ಪೇಜಾವರ ಹಿರಿಯ ಶ್ರೀಗಳು ಮಾಡಿದ್ದ ಪುಣ್ಯ ಕಾರ್ಯ, ಜಡವಾದ ಪ್ರತಿಮೆ ಮುಂದೆ ನಿಂತಾಗ ಅಲೌಕಿಕ ಅನುಭವ ಆಗುತ್ತದೆ. ಭವ್ಯ ಮಂದಿರದ ನಿರ್ಮಾಣದಿಂದ ಭಾರತದ ದಿಕ್ಕು ಬದಲಾಗಲಿದೆ. ರಾಮನ ಪ್ರತಿಷ್ಠಾಪನೆಗಾಗಿ ವಿಶ್ವೇಶ್ವತೀರ್ಥ ಸ್ವಾಮೀಜಿ ಹೋರಾಡಿದರು ಎಂದು ಹೇಳಿದರು. ಅವರು ಭೌತಿಕವಾಗಿ ಇಲ್ಲದಿದ್ದರೂ ಪ್ರತಿಷ್ಠಾಪನೆಯಿಂದ ಸಂಪ್ರೀತರಾಗಿರಹುದು. 1992ರಲ್ಲಿ ಪ್ರತಿಮಾನ್ಯಾಸ ನೆರವೇರಿಸಿದ್ದ ಪೇಜಾವರದ ವಿಶ್ವೇಶ ತೀರ್ಥರು . ವಿಶ್ವೇಶ ತೀರ್ಥರು ಮಾಡಿದ್ದ ಪ್ರತಿಮಾನ್ಯಾಸವನ್ನ ಶ್ರೀವಿಶ್ವಪ್ರಸನ್ನ ನೆರವೇರಿಸಿದ್ರು. ಸಂಪೂರ್ಣ ಪ್ರತಿಮೆಗೆ ಚೈತನ್ಯ ಕೊಡುವುದಕ್ಕೆ ಪ್ರತಿ ಮಾನ್ಯಾಸ ಎನ್ನಲಾಗುತ್ತದೆ.
ಇದನ್ನೂ ವೀಕ್ಷಿಸಿ: Ram Mandir: ದೇಶದ ಹಬ್ಬಕ್ಕೆ ಕನ್ನಡಿಗರ ಕೊಡುಗೆ ಅಪಾರ: ಅಯೋಧ್ಯೆಯಲ್ಲಿ ಪ್ರಸಾರವಾಯ್ತು ಗಾಯಕಿ ಸುಪ್ರಭಾ ಹಾಡು !