ಅವಧಿಪೂರ್ವ ಚುನಾವಣೆ ನಡೆದುಬಿಡುತ್ತಾ..? ಅಧಿವೇಶನದಲ್ಲಿ ಸಮರ ಘೋಷ?! ಏನಿದು ರಹಸ್ಯ?

ಅವಧಿಪೂರ್ವ ಚುನಾವಣೆ ನಡೆದುಬಿಡುತ್ತಾ..? ಅಧಿವೇಶನದಲ್ಲಿ ಸಮರ ಘೋಷ?! ಏನಿದು ರಹಸ್ಯ?

Published : Sep 04, 2023, 02:14 PM IST

ಸೆಪ್ಟಂಬರ್ ಅಂತ್ಯದ ವೇಳೆಗೆ ಏನಾಗಲಿದೆ ರಾಜಕಾರಣ?
ಒನ್ ನೇಷನ್-ಒನ್ ಎಲೆಕ್ಷನ್ ಇದೊಂದೇ ಅಲ್ಲ ಮ್ಯಾಟರ್!
ಮಾಸ್ಟರ್ ಸ್ಟ್ರೋಕ್ ಕೊಡೋಕೆ ಸಜ್ಜಾಗಿದೆ ಮೋದಿ ಪಡೆ!
 

ನಮ್ಮ ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ಏನೇ ಮಾಡಿದ್ರು, ಅದೊಂದು ಸೆನ್ಸೇಷನ್ ಸೃಷ್ಟಿಸುತ್ತೆ. ಈಗಲೂ ಅಂಥದ್ದೇ ಒಂದು ಸೆನ್ಷೇಷನ್ ಕ್ರಿಯೇಟ್ ಮಾಡೋ ಹಾಗೆ ಕಾಣ್ತಾ ಇದೆ. ಇದರ ಸುಳಿವು ನೀಡಿರೋದು ಇದೇ ತಿಂಗಳಲ್ಲಿ ನಡೆಯಲಿರೋ 5 ದಿನ ವಿಶೇಷ ಸದನ. ಸೆಪ್ಟಂಬರ್ 18ರಿಂದ 24ರ ವರೆಗೆ ವಿಶೇಷ ಸದನ ನಡೆಸೋದಕ್ಕೆ ಮೋದಿ(Narendra Modi) ಸರ್ಕಾರ ಆಹ್ವಾನ ನೀಡಿದೆ. ಇದೊಂದು ವಿಚಾರವೇ ದೊಡ್ಡದೊಂದು ಚರ್ಚೆಗೆ ಕಾರಣವಾಗಿದೆ. ಮೋದಿ ಅವರಿಗೆ ಒನ್ ನೇಷನ್ ಒನ್ ಎಲೆಕ್ಷನ್(One Nation One Election) ಅನ್ನೋ ಕಾನ್ಸೆಪ್ಟ್ ಮೇಲೆ ಒಲವು ಜಾಸ್ತಿ. 2014ರಲ್ಲಿ ಗೆದ್ದು ದೆಹಲಿ ಗದ್ದುಗೆ ಹತ್ತಿದಾಗಿಂದಲೂ ಇದರ ಬಗ್ಗೆ ಮಾತಾಡ್ತಲೇ ಇದ್ರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ.ಹಾಗಾಗಿನೇ, ಈ ಅಧಿವೇಶನ ಕರೆದು, ತಮ್ಮ ಕನಸಿನ ಕಾನೂನಿಗೆ ಜೀವ ತುಂಬಬಹುದು ಅಂತ ಹಲವರು ಮಾತಾಡ್ಕೊಂಡ್ರು. ಎಲ್ಲರೂ ನಿರೀಕ್ಷೆ ಮಾಡ್ತಾ ಇರೋದು, ಮೋದಿ ಅವರು ಒಂದು ದೇಶ-ಒಂದು ಚುನಾವಣೆ ನೀತಿನಾ ಜಾರಿಗೆ ತರೋ ಪ್ರಯತ್ನ ಮಾಡ್ತಾರೆ ಅನ್ನೋದು. ಈ ನಿರೀಕ್ಷೆಗೆ ಕಾರಣವೂ ಇದೆ. ಈಗಾಗಲೇ ಈ ನೂತನ ಕಾನೂನು ಜಾರಿಯ ಸಾಧ್ಯಾಸಾಧ್ಯತೆಯ ಬಗ್ಗೆ ರಿಪೋರ್ಟ್ ರೆಡಿ ಮಾಡಲಿಕ್ಕೆ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್(Ram Nath Kovind) ಅವರ ನೇತೃತ್ವದಲ್ಲಿ ಕಮಿಟಿ ರೆಡಿಯಾಗಿದೆ. ಅದರ ಜೊತೆಗೆ, ಅಮಿತ್ ಶಾ ಹಾಗೂ ವಿಪಕ್ಷ ನಾಯಕರನ್ನೊಳಗೊಂಡ ಉನ್ನತ ಸಮಿತಿಯ ರಚನೆಯೂ ಆಗಿದೆ. ಹಾಗಾದ್ರೆ, ಈ ಸಮಿತಿಗಳ ಅಭಿಪ್ರಾಯದ ಹಾಗೆ, ಒನ್ ನೇಷನ್ ಒನ್ ಎಲೆಕ್ಷನ್ ಜಾರಿಗೊಳಿಸಿಯೇ ಬಿಡ್ತಾರೆ ಅನ್ನೋದು ಹಲವರ ಅಭಿಪ್ರಾಯವಾಗಿದೆ.

ಇದನ್ನೂ ವೀಕ್ಷಿಸಿ:  ಆಫ್ರಿಕಾದಲ್ಲಿ ಫುಡ್ ಟೆಕ್ನಿಶಿಯನ್, ಭಾರತದಲ್ಲಿ ಉದ್ಯಮಿ: ಬಾವಬಾಬ್ ಹಣ್ಣು ಬಳಸಿ ಆರೋಗ್ಯ ವರ್ಧಕ ಉತ್ಪನ್ನ !

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more